ಶಿಕ್ಷಕರು ಚುನಾವಣಾ ಕಾರ್ಯಗಳನ್ನು ಮಾಡಬೇಕಿರುವುದರಿಂದ ಪರೀಕ್ಷೆ ಮುಂದೂಡಲಾಗಿದೆ, ಶೀಘ್ರದಲ್ಲೇ ಸಿಬಿಎಸ್‌'ಸಿ ಪರೀಕ್ಷಾ ಪಟ್ಟಿಯನ್ನು ಘೋಷಿಸಲಿದೆ ಎಂದೂ ತಿಳಿಸಿದೆ.

ನವದೆಹಲಿ(ಜ.07): ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌'ಸಿ) ನಡೆಸುವ 12ನೇ ತರಗತಿಯ ಪರೀಕ್ಷೆಯನ್ನು ಮುಂದೂಡಲಾಗಿದೆ.

ಮಾರ್ಚ್ ಮೊದಲ ವಾರ ಆರಂಭವಾಗಬೇಕಿದ್ದ ಪರೀಕ್ಷೆ ಚುನಾವಣೆ ಕಾರಣ ಎರಡನೇ ವಾರಕ್ಕೆ (ಮಾ.9/10ರಿಂದ) ಆರಂಭವಾಗಲಿದೆ. ಆದರೆ ಫಲಿತಾಂಶ ತಡವಾಗದೆ, ಮೇ ತಿಂಗಳಲ್ಲೇ ಪ್ರಕಟಿಸಲಾಗುವುದು ಎಂದೂ ಮೂಲಗಳು ಸ್ಪಷ್ಟಪಡಿಸಿದೆ.

ಶಿಕ್ಷಕರು ಚುನಾವಣಾ ಕಾರ್ಯಗಳನ್ನು ಮಾಡಬೇಕಿರುವುದರಿಂದ ಪರೀಕ್ಷೆ ಮುಂದೂಡಲಾಗಿದೆ, ಶೀಘ್ರದಲ್ಲೇ ಸಿಬಿಎಸ್‌'ಸಿ ಪರೀಕ್ಷಾ ಪಟ್ಟಿಯನ್ನು ಘೋಷಿಸಲಿದೆ ಎಂದೂ ತಿಳಿಸಿದೆ.

ಉ.ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಫೆ. 11ಕ್ಕೆ ಶುರುವಾಗುವ ಚುನಾವಣೆ ಮಾ.8ರವರೆಗೆ ನಡೆಯಲಿದೆ.