Asianet Suvarna News Asianet Suvarna News

36-24-26 ಮಹಿಳೆಯರ ಫರ್ಫೆಕ್ಟ್ ಶೇಪ್! ವೈರಲ್ ಆಯ್ತು ಸಿಬಿಎಸ್ಇ ಪುಸ್ತಕ

36-24-36 ದೇಹದ ಅಳತೆ ಇದ್ದರೆ ಅದು ಮಹಿಳೆಯರ ದೇಹದ ಫರ್ಫೆಕ್ಟ್ ಶೇಪ್ ಎಂದು ದ್ವಿತೀಯ ಪಿಯುಸಿ ಸಿಬಿಎಸ್ ಸಿ ದೈಹಿಕ ಶಿಕ್ಷಣ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

CBSE book defines 36 24 36 as best female body shape sparks row
  • Facebook
  • Twitter
  • Whatsapp

ನವದೆಹಲಿ (ಏ.12): 36-24-36 ದೇಹದ ಅಳತೆ ಇದ್ದರೆ ಅದು ಮಹಿಳೆಯರ ದೇಹದ ಫರ್ಫೆಕ್ಟ್ ಶೇಪ್ ಎಂದು ದ್ವಿತೀಯ ಪಿಯುಸಿ ಸಿಬಿಎಸ್ಇ ದೈಹಿಕ ಶಿಕ್ಷಣ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

ಈ ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಒತ್ತಾಯ ಕೂಡಾ ಕೇಳಿ ಬರುತ್ತಿದೆ. ಡಾ.ವಿ.ಕೆ ಶರ್ಮಾ ಬರೆದಿರುವ ಹೆಲ್ತ್ ಅಂಡ್ ಫಿಸಿಕಲ್ ಎಜುಕೇಶನ್ ಎನ್ನುವ ಪುಸ್ತಕದಲ್ಲಿ ಸಿಬಿಎಸ್ಇ ಪುಸ್ತಕದಲ್ಲಿ ಈ ಅಂಶವನ್ನು ಸೇರಿಸಲಾಗಿದೆ.

36-24-36 ದೇಹದ ಅಳತೆ ಹೊಂದಿರುವ ಮಹಿಳೆಯನ್ನು ಫರ್ಫೆಕ್ಟ್ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಮಿಸ್ ವರ್ಡ್, ಮಿಸ್ ಯೂನಿವರ್ಸ್ ಸ್ಪರ್ಧೆಗಳಲ್ಲಿ 36-24-36 ಶೇಪನ್ನು ಹೊಂದಿರುವ ಮಹಿಳೆಯರನ್ನು ಪರಿಗಣಿಸಲಾಗುತ್ತದೆ ಎಂದು ಆ ಪುಸ್ತಕದ ಆಯ್ದ ಭಾಗಗಳಲ್ಲಿ ಹೇಳಲಾಗಿದೆ. ಇದು ಈಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಿಗರು ಇದನ್ನು ಶೇರ್ ಮಾಡಿದ್ದು ಪ್ರಕಾಶಕರು ಈ ಅಂಶವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಶಾಲಾ ಪಠ್ಯಕ್ರಮವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.  

Follow Us:
Download App:
  • android
  • ios