ಬ್ಯಾಂಕುಗಳಿಗೆ ಭಾರೀ ಮೊತ್ತದ ಸಾಲವನ್ನು ಬಾಕಿವುಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಿಂದ ಜಾಮೀನು-ರಹಿತ ವಾರಂಟ್ ಜಾರಿಗೊಳಿಸುವಲ್ಲಿ ಸಿಬಿಐ ಇಂದು ಯಶಸ್ವಿಯಾಗಿದೆ.
ಮುಂಬೈ (ನ.21): ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಹಿಂತಿಸುಗಿಸದೇ, ಲಂಡನ್’ನಲ್ಲಿ ಹೋಗಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಬಂಧನವಾಗುವ ದಿನಗಳು ಹತ್ತಿರವಾಗಿವೆ.
ಬ್ಯಾಂಕುಗಳಿಗೆ ಭಾರೀ ಮೊತ್ತದ ಸಾಲವನ್ನು ಬಾಕಿವುಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಿಂದ ಜಾಮೀನು-ರಹಿತ ವಾರಂಟ್ ಜಾರಿಗೊಳಿಸುವಲ್ಲಿ ಸಿಬಿಐ ಇಂದು ಯಶಸ್ವಿಯಾಗಿದೆ.
ಈ ವಾರಂಟ್ ಆಧಾರದಲ್ಲಿ ಇಂಗ್ಲಂಡ್’ನಿಂದ ಮಲ್ಯರನ್ನು ಗಡಿಪಾರು ಮಾಡಬೇಕೆಂದು ಅಲ್ಲಿನ ಅಧಿಕಾರಿಗಳಿಗೆ ಸಿಬಿಐ ಮನವಿ ಮಾಡಲಿದೆ.