Asianet Suvarna News Asianet Suvarna News

ಕಾಂಗ್ರೆಸ್ಸಿಗೆ ಮತ್ತೊಂದು ಮರ್ಮಾಘಾತ..!? ಹಿ.ಪ್ರ. ಸಿಎಂ ವೀರಭದ್ರಸಿಂಗ್ ವಿರುದ್ಧ ಸಿಬಿಐ ಚಾರ್ಜ್'ಶೀಟ್

ವೀರಭದ್ರ ಸಿಂಗ್ ಕೇಂದ್ರ ಸಚಿವರಾಗಿದ್ದಾಗ 2009ರಿಂದ 2012ರವರೆಗಿನ ಅವಧಿಯಲ್ಲಿ 6.03 ಕೋಟಿಯಷ್ಟು ಅಕ್ರಮ ಆಸ್ತಿ ಸಂಗ್ರಹಿಸಿರುವುದು ಸಿಬಿಐನ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.

cbi files chargesheet against himachal cm virbhadra singh

ನವದೆಹಲಿ(ಮಾ. 31): ಅಕ್ರಮ ಆಸ್ತಿ ಪ್ರಕರಣ ಸಂಬಂಧ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ ವಿರುದ್ಧ ಸಿಬಿಐ ಚಾರ್ಜ್'ಶೀಟ್ ಸಲ್ಲಿಸಿದೆ. ಸಿಎಂ ಅವರಷ್ಟೇ ಅಲ್ಲದೇ ಅವರ ಪತ್ನಿ ಪ್ರತಿಭಾ ಸಿಂಗ್ ಹಾಗೂ ಇನ್ನಿಬ್ಬರ ಮೇಲೂ ಆರೋಪ ಪಟ್ಟಿ ದಾಖಲಿಸಲಾಗಿದೆ. ಸಿಬಿಐ ದಾಖಲಿಸಿರುವ ಎಫ್'ಐಆರ್'ನ್ನು ರದ್ದುಗೊಳಿಸುವಂತೆ ವೀರಭದ್ರ ಸಿಂಗ್ ಮಾಡಿಕೊಂಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಸಿಬಿಐ ಚಾರ್ಜ್'ಶೀಟ್ ಸಲ್ಲಿಸಿದೆ.

ಹಿಮಾಚಲಪ್ರದೇಶದಲ್ಲಿ ಯಾವುದೇ ಕೋರ್ಟ್ ಆದೇಶವಿಲ್ಲದೇ ತನಿಖೆ, ವಿಚಾರಣೆ ನಡೆಸಲು ಹಾಗೂ ಪ್ರಕರಣ ದಾಖಲಿಸಿಕೊಳ್ಳಲು ಸಿಬಿಐಗೆ ಅಧಿಕಾರವಿಲ್ಲ. ಯಾವುದೋ ದುರುದ್ದೇಶದಿಂದ ಸಿಬಿಐ ತಮ್ಮ ಖಾಸಗಿ ಮನೆ ಮತ್ತಿತರ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ವೀರಭದ್ರ ಸಿಂಗ್ ಮಾಡಿದ ವಾದವನ್ನು ದಿಲ್ಲಿ ಹೈಕೋರ್ಟ್ ಪುರಸ್ಕರಿಸಲಿಲ್ಲ.

ಆದರೆ, ವೀರಭದ್ರ ಸಿಂಗ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಮುಖ್ಯಮಂತ್ರಿಯನ್ನು ರಕ್ಷಿಸಲು ರಾಜ್ಯ ಸರಕಾರ ಶತಾಯಗತಾಯ ಯತ್ನಿಸುತ್ತಿದೆ ಎಂಬುದು ಸಿಬಿಐನ ವಾದವಾಗಿದೆ.

ವೀರಭದ್ರ ಸಿಂಗ್ ಅವರು ಕೇಂದ್ರ ಸಚಿವರಾಗಿದ್ದಾಗ 2009ರಿಂದ 2012ರವರೆಗಿನ ಅವಧಿಯಲ್ಲಿ 6.03 ಕೋಟಿಯಷ್ಟು ಅಕ್ರಮ ಆಸ್ತಿ ಸಂಗ್ರಹಿಸಿರುವುದು ಸಿಬಿಐನ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಈ ಸಂಬಂಧ ಈಗ ಹಿ.ಪ್ರ. ಸಿಎಂ ಆಗಿರುವ ವೀರಭದ್ರ ಸಿಂಗ್, ಅವರ ಪತ್ನಿ ಪ್ರತಿಭಾ ಸಿಂಗ್, ಎಲ್'ಐಸಿ ಏಜೆಂಟ್ ಆನಂದ್ ಚೌಹಾಣ್ ಮತ್ತವರ ಸಹಚರ ಚುನ್ನಿ ಲಾಲ್ ಎಂಬುವವರ ವಿರುದ್ಧ ಸಿಬಿಐ 2016, ಸೆ. 23ರಂದು ಪ್ರಕರಣ ದಾಖಲಿಸಿದೆ.

Follow Us:
Download App:
  • android
  • ios