ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಒಟ್ಟು 8 ಮಂದಿ ಮಾಜಿ ಅಧಿಕಾರಿಗಳ ಹೆಸರಿದೆ.

ಮುಂಬೈ (ಜ.24): ಉದ್ಯಮಿ ವಿಜಯ್​ ಮಲ್ಯಗೆ ಸಾಲ ಮಂಜೂರಾತಿ ಮಾಡುವಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಸಿಬಿಐ ಕೋರ್ಟ್​ನಲ್ಲಿ ಇಂದು ಆರೋಪಪಟ್ಟಿ ಸಲ್ಲಿಸಲಾಗಿದೆ.

ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಒಟ್ಟು 8 ಮಂದಿ ಮಾಜಿ ಅಧಿಕಾರಿಗಳ ಹೆಸರಿದೆ.

ಐಡಿಬಿಐ ಬ್ಯಾಂಕ್​ ಅಧ್ಯಕ್ಷ ಯೋಗೇಶ್​ ಅಗರ್ವಾಲ್, ಅದೇ ಬ್ಯಾಂಕಿನ ಮೂವರು ಮಾಜಿ ಅಧಿಕಾರಿಗಳು,ಕಿಂಗ್'​ಫಿಷರ್​'ನ ಮುಖ್ಯ ಹಣಕಾಸು ಅಧಿಕಾರಿ ರಘುನಾಥನ್​ ಸೇರಿದಂತೆ ಕಿಂಗ್​'ಫಿಷರ್​ ಏರ್'​ಲೈನ್ಸ್​ನ ನಾಲ್ವರು ಅಧಿಕಾರಿಗಳ ಹೆಸರು ಆರೋಪಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ನಿನ್ನೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದ 8 ಆರೋಪಿಗಳಿಗೆ ಫೆ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.