ಕಾರ್ತಿ ಸಿಬಿಐ ಕಸ್ಟಡಿ ಮಾರ್ಚ್ 12ರವರೆಗೆ ವಿಸ್ತರಣೆ

CBI custody of Karti Chidambaram extended till March 12
Highlights

ಐಎನ್‌ಎಕ್ಸ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಕಾರ್ತಿ ಚಿದಂಬರಂಗೆ ಮಾರ್ಚ್ 20ರವೆಗೆ 'ದಬ್ಬಾಳಿಕೆಯ ಕ್ರಮ' ಕೈ ಕೊಳ್ಳದಂತೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಕಾರ್ತಿಯ ಕಸ್ಡಡಿಯನ್ನು ಮಾರ್ಚ್ 12ರವೆಗೆ ವಿಸ್ತರಿಸಿದೆ.

ಹೊಸದಿಲ್ಲಿ: ಐಎನ್‌ಎಕ್ಸ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಕಾರ್ತಿ ಚಿದಂಬರಂಗೆ ಮಾರ್ಚ್ 20ರವೆಗೆ 'ದಬ್ಬಾಳಿಕೆಯ ಕ್ರಮ' ಕೈ ಕೊಳ್ಳದಂತೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಕಾರ್ತಿಯ ಕಸ್ಡಡಿಯನ್ನು ಮಾರ್ಚ್ 12ರವೆಗೆ ವಿಸ್ತರಿಸಿದೆ.

ಈ ಸಮಯದಲ್ಲಿ ಸಿಎಯೊಂದಿಗೆ, ಕಾರ್ತಿಯನ್ನು ವಿಚಾರಣೆಗೊಳಿಪಡಿಸಲಾಗುವುದು. ಮಾ.29ರವರೆಗೆ ಕಾರ್ತಿಯನ್ನು ಬಂಧಿಸದಂತೆ ಹೈ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ. 
 
ಮಾರ್ಚ್ 15ರಂದು ಕಾರ್ತಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿರುವ ವಿಶೇಷ ನ್ಯಾಯಾಧೀಶರ ಮುಂದೆ  ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ಕಾರ್ತಿಯನ್ನು ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ಕಾರ್ತಿ ಸಿಎ ಎಸ್.ಭಾಸ್ಕರರಾಮನ್‌ರೊಂದಿಗೆ ಕಾರ್ತಿಯನ್ನು ವಿಚಾರಣೆಗೊಳಪಡಿಸಲು ಸಿಬಿಐ ಅನುಮತಿ ನೀಡಿದೆ. 

loader