Asianet Suvarna News Asianet Suvarna News

'ನನ್ನ ಮೇಲೆ ಸಿಬಿಐ ದಾಳಿ ಬಿಜೆಪಿ ಪಿತೂರಿ'

ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದು, ಅವರ ಮೇಲೆ ಭ್ರಷ್ಟಾಚಾರದ  ಕೇಸ್ ಹಾಕಿರುವುದನ್ನು ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿದ್ದಾರೆ.

CBI corruption case Lalu Prasad rubbishes charges of hotel tender scam claims its a BJP conspiracy
  • Facebook
  • Twitter
  • Whatsapp

ನವದೆಹಲಿ (ಜು.07): ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದು, ಅವರ ಮೇಲೆ ಭ್ರಷ್ಟಾಚಾರದ  ಕೇಸ್ ಹಾಕಿರುವುದನ್ನು ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿದ್ದಾರೆ.

2006ರಲ್ಲಿ ರೈಲ್ವೇ ಸಚಿವರಾಗಿದ್ದಾಗ ರಾಂಚಿ ಹಾಗೂ ಪುರಿಯಲ್ಲಿ ಹೊಟೇಲ್ ನಿರ್ಮಾಣ, ನಿರ್ವಹಣೆ ಹಾಗೂ ನಡೆಸುವ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿರುವ ವಿಚಾರದಲ್ಲಿ ಲಾಲೂ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ದೆಹಲಿ, ಪಾಟ್ನಾ, ಗುರ್ಗಾಂವ್ ಹಾಗೂ ಇನ್ನಿತರ ಸ್ಥಳಗಳಲ್ಲಿ 12 ಕಡೆ ದಾಳಿ ನಡೆಸಿದೆ.

ನಾನು ಮತ್ತು ನನ್ನ ಪಕ್ಷ ಇದಕ್ಕೆಲ್ಲಾ ಹೆದರುವುದಿಲ್ಲ. ನಾನು ಯಾವ ತಪ್ಪು ಮಾಡಿಲ್ಲ. ಇದು ನನ್ನ ವಿರುದ್ಧ ಬಿಜೆಪಿ ಮಾಡಿದ ಪಿತೂರಿ . ಅವರ ಎದುರು ನಾವು ತಲೆಬಾಗಬೇಕೆಂದು ಹೀಗೆಲ್ಲಾ ಮಾಡಿದ್ದಾರೆ ಎಂದು ಲಾಲು ಆರೋಪಿಸಿದ್ದಾರೆ.  

Follow Us:
Download App:
  • android
  • ios