Asianet Suvarna News Asianet Suvarna News

ಸಿಬಿಐಯಿಂದ ಮೂವರು ಕೇಂದ್ರೀಯ ಅಬಕಾರಿ ಅಧಿಕಾರಿಗಳ ಬಂಧನ

ದೂರುದಾರರಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಇಬ್ಬರು ಸೂಪರಿಟೆಂಡೆಂಟ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಒಬ್ಬ ಇನ್ಸ್ ಪೆಕ್ಟರನ್ನು ಸಿಬಿಐ ಹರ್ಯಾಣದ ಸೋನೆಪತ್ ನಲ್ಲಿ ಇಂದು ಬಂಧಿಸಿದೆ.

CBI Arrests 3 Central Excise Officials in a Bribery Case

ನವದೆಹಲಿ (ಫೆ.21): ದೂರುದಾರರಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಇಬ್ಬರು ಸೂಪರಿಟೆಂಡೆಂಟ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಒಬ್ಬ ಇನ್ಸ್ ಪೆಕ್ಟರನ್ನು ಸಿಬಿಐ ಹರ್ಯಾಣದ ಸೋನೆಪತ್ ನಲ್ಲಿ ಇಂದು ಬಂಧಿಸಿದೆ.

ದೂರುದಾರರ ಕಂಪನಿಗೆ ಅಧಿಕಾರಿಗಳು ಫೆ. 13 ರಂದು ಲೆಕ್ಕಪತ್ರ ಪರಿಶೋಧನೆಗೆ ಭೇಟಿ ನೀಡಿದ್ದರು. ಆಗ ಡಬ್ಬಲ್ ಬಿಲ್ಲಿಂಗ್, ಅಬಕಾರಿ ತೆರಿಗೆ ವಂಚನೆ ಇತ್ಯಾದಿ ವಿಚಾರಗಳ ಬಗ್ಗೆ ಖ್ಯಾತೆ ತೆಗೆದಿದ್ದಾರೆ. ಅದಕ್ಕಾಗಿ 25-30 ಲಕ್ಷ ದಂಡವನ್ನು ಕಂಪನಿಗೆ ಹೇರಲಾಗುತ್ತದೆ ಎಂದು ಹೆದರಿಸಿದ್ದರು ಎನ್ನಲಾಗಿದೆ.

ತೆರಿಗೆಯನ್ನು ಕಡಿಮೆ ಮಾಡಬೇಕೆಂದರೆ 10 ಲಕ್ಷ ಲಂಚವನ್ನು ಕೊಡಿ ಎಂದು ಅಧಿಕಾರಿಗಳು ಬೇಡಿಕೆಯಿಟ್ಟಿದ್ದಾರೆ. ನನ್ನ ವಿನಂತಿ ಮೇರೆಗೆ 9 ಲಕ್ಷಕ್ಕೆ ಒಪ್ಪಿಕೊಂಡಿದ್ದಾರೆ. ಮೊದಲ ಕಂತಿನಲ್ಲಿ 3 ಲಕ್ಷ ತೆಗೆದುಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.  

Follow Us:
Download App:
  • android
  • ios