ನೂರಾರು ವರ್ಷಗಳ ಹಿಂದೆಯೇ ಕಾವೇರಿ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ

ಬೆಂಗಳೂರು(ಸೆ.06): ಕಾವೇರಿ ನದಿ ನೀರಿನ ಹೋರಾಟ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳ ಹಿಂದೆಯೇ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ

- 1803ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೆರೆ ಮೂಲಕ ನೀರಾವರಿ

- ಕೆರೆ ಮೂಲಕ ನೀರಾವರಿಗೆ ಮದ್ರಾಸ್ ಪ್ರೆಸಿಡೆನ್ಸಿ ಆಕ್ಷೇಪ

- 1892ರಲ್ಲಿ ಮೈಸೂರು- ಮದ್ರಾಸ್ ನಡುವೆ ಒಪ್ಪಂದ

- ನೀರಾವರಿ ಯೋಜನೆ ಕೈಗೊಳ್ಳಬೇಕಾದರೆ ಮದ್ರಾಸ್ ಆಡಳಿತದ ಅನುಮತಿ ಷರತ್ತು

- 1911- ಕೃಷ್ಣರಾಜಸಾಗರ ನಿರ್ಮಾಣಕ್ಕೆ ನಡೆದ ಶಿಲಾನ್ಯಾಸಕ್ಕೆ ಆಕ್ಷೇಪ

- 1924- ಹಲವು ಷರತ್ತುಗಳೊಂದಿಗೆ ಕೆಆರ್‌ಎಸ್ ನಿರ್ಮಾಣಕ್ಕೆ ಒಪ್ಪಂದ

- ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ

- ಅಣೆಕಟ್ಟು ನಿರ್ಮಿಸಬೇಕಾದರೆ ಮದ್ರಾಸ್ ಸರ್ಕಾರದ ಅನುಮತಿ ಷರತ್ತು

- 1931- ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಪೂರ್ಣ

- 1972- ಕೇಂದ್ರದಿಂದ ಕಾವೇರಿ ಸತ್ಯಶೋಧನಾ ಸಮಿತಿ ರಚನೆ. ವರದಿ ಸಲ್ಲಿಕೆ

- 1973- ತಮಿಳುನಾಡಿನಿಂದ ಸಮಿತಿ ವರದಿ ತಿರಸ್ಕಾರ

- 1990- ಸುಪ್ರೀಂಕೋರ್ಟ್ ಸೂಚನೆಯಂತೆ ಕಾವೇರಿ ನ್ಯಾಯ ಮಂಡಳಿ ರಚನೆ

- ಕೇಂದ್ರದಿಂದ ಚಿತ್ರತೋಷ್ ಮುಖರ್ಜಿ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿ ರಚನೆ

- 1991- ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು

- ತಮಿಳುನಾಡಿಗೆ 205 ಟಿಎಂಸಿ ನೀರು ಹರಿಸಲು ಆದೇಶ

- 1991- ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಸುಗ್ರೀವಾಜ್ಞೆ

- 1991- ನೀರು ಬಿಡಲು ಆದೇಶ. ರಾಜ್ಯದಲ್ಲಿ ತೀವ್ರ ಹೋರಾಟ

- 1995- ಬರ ನಡುವೆಯೂ ತಮಿಳುನಾಡಿಗೆ 11 ಟಎಂಸಿ ನೀರು ಬಿಡಲು ಆದೇಶ

- ತಮಿಳುನಾಡಿಗೆ ನೀರು ಹರಿಸಲು ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ

- ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದಿತ್ತು ಸಭೆ

- ಸಭೆಯಲ್ಲಿ ತಮಿಳುನಾಡಿಗೆ 6 ಟಿಎಂಸಿ ನೀರು ಬಿಡಲು ಸೂಚನೆ

- 1997ರಲ್ಲಿ ಕಾವೇರಿ ನದಿ ಪ್ರಾಧಿಕಾರ ರಚನೆ

- 2002- ಪ್ರಾಧಿಕಾರ ಸಭೆಯಲ್ಲಿ ನಿರ್ಧಾರವಾಗುವವರೆಗೂ ಬಿಡಲು ಸುಪ್ರೀಂಕೋರ್ಟ್ ಆದೇಶ

- ನಿತ್ಯ 1.25 ಟಿಎಂಸಿ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ

- ಬರ ಇದ್ದಿದ್ದರಿಂದ ರಾಜ್ಯದಲ್ಲಿ ತೀವ್ರ ಪ್ರತಿಭಟನೆ

- ಪ್ರಾಧಿಕಾರ ಸಭೆ ನಂತರ 9 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯದ ನಿರ್ಧಾರ

- 2002- ಮೈಸೂರು ಜಿಲ್ಲೆಯ ಬೀಚನಹಳ್ಳಿ ಗ್ರಾ. ಪಂ. ಸದಸ್ಯ ಗುರುಸ್ವಾಮಿ ಕಬಿನಿಗೆ ಹಾರಿ ಹುತಾತ್ಮ

- 2007- ನ್ಯಾಯಮಂಡಳಿ ಅಂತಿಮ ತೀರ್ಪು. ತಮಿಳುನಾಡಿಗೆ 419 ಟಿಎಂಸಿ

- ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆ

- ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಲು ಆದೇಶ

- 2012- ಕಾವೇರಿ ನದಿ ಪ್ರಾಧಿಕಾರದಿಂದ ನಿತ್ಯ 9 ಸಾವಿರ ಕ್ಯೂಸೆಕ್ ಬಿಡಲು ಸೂಚನೆ

- ಬರದ ಕಾರಣ ರಾಜ್ಯ ಸರ್ಕಾರದಿಂದ ನಕಾರ

- ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮೊರೆ

- ನ್ಯಾಯಾಲಯದಿಂದಲೂ ನೀರು ಬಿಡಲು ಆದೇಶ

- ಕೊನೆಗೂ ನ್ಯಾಯಾಲಯದ ಆದೇಶಕ್ಕೆ ಮಣಿದು ನೀರು ಬಿಡುಗಡೆ