2033ರವರೆಗೆ ನಮ್ಮ ಡ್ಯಾಂಗಳ ಜುಟ್ಟು ಮಂಡಳಿ ಕೈಯಲ್ಲಿ

First Published 17, Feb 2018, 11:35 AM IST
Cauvery Verdict Case News
Highlights

ಜಲ ನ್ಯಾಯಾಧಿಕರಣದ ತೀರ್ಪುಗಳು ಸಂಸತ್ತಿನ ಅನುಮೋದನೆಯೊಂದಿಗೆ ಜಾರಿಗೆ  ಬರುತ್ತವೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಣೆಯಾಗುತ್ತಲೇ ಜಾರಿಗೆ ಬರುತ್ತದೆ. ಸುಪ್ರೀಂ ಕೋರ್ಟ್ 6 ವಾರದೊಳಗೆ ಸ್ಕೀಮ್ ಅಂದರೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಜಾರಿ ಗೊಳಿಸಬೇಕು ಎಂದು ಸ್ಪಷ್ಟವಾಗಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ

ನವದೆಹಲಿ: ಜಲ ನ್ಯಾಯಾಧಿಕರಣದ ತೀರ್ಪುಗಳು ಸಂಸತ್ತಿನ ಅನುಮೋದನೆಯೊಂದಿಗೆ ಜಾರಿಗೆ  ಬರುತ್ತವೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಣೆಯಾಗುತ್ತಲೇ ಜಾರಿಗೆ ಬರುತ್ತದೆ. ಸುಪ್ರೀಂ ಕೋರ್ಟ್ 6 ವಾರದೊಳಗೆ ಸ್ಕೀಮ್ ಅಂದರೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಜಾರಿ ಗೊಳಿಸಬೇಕು ಎಂದು ಸ್ಪಷ್ಟವಾಗಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ ತನ್ನ ಆದೇಶವನ್ನು ಜಾರಿಗೊಳಿಸುವ ಹೊಣೆಯನ್ನು ಮಂಡಳಿಗೆ ನೀಡಿದೆ. ಸಾಮಾನ್ಯವಾಗಿ ಜಲ ಹಂಚಿಕೆ ವಿವಾದಗಳನ್ನು ಶಾಶ್ವತವಾಗಿ ಇತ್ಯರ್ಥ ಪಡಿಸುವ ಪರಂಪರೆಯಿಲ್ಲ. ನ್ಯಾಯಾಧಿಕರಣ ಅಥವಾ ಸುಪ್ರೀಂ ಕೋರ್ಟ್ ಒಂದು ನಿರ್ದಿಷ್ಟ ಅವಧಿಗೆ ಅನ್ವಯಿಸಿ ತನ್ನ ತೀರ್ಪು ಹೊರಡಿಸುತ್ತದೆ. ಆ ಬಳಿಕ ಮತ್ತೊಮ್ಮೆ ವಿಚಾರಣೆ ಅಥವಾ ತೀರ್ಪಿನ ಮರು ಪರಿಶೀಲನೆ ನಡೆಸುತ್ತದೆ. ಇದೀಗ ಸುಪ್ರೀಂ ಕೋರ್ಟ್ ಮಾಸಿಕವಾಗಿ ನೀರು ಹಂಚಿ ತಾನು ನೀಡಿರುವ ತೀರ್ಪು 15 ವರ್ಷಗಳ ಕಾಲ ಜಾರಿಯಲ್ಲಿ ರುತ್ತದೆ ಎಂದು ಹೇಳಿದೆ.

ಆ ಬಳಿಕ ತೀರ್ಪಿನ ಮರುಪರಿ ಶೀಲನೆ ನಡೆಯಬಹುದು. ಸುಪ್ರೀಂ ತೀರ್ಪಿನಲ್ಲಿನ ಖಡಕ್‌ತನವನ್ನು ಗಮನಿಸಿದರೆ ಮುಂದಿನ ಜಲವರ್ಷ ಅಂದರೆ ಜೂನ್ ನಿಂದ ಕಾವೇರಿ ಕೊಳ್ಳದ ಜುಟ್ಟು ನ್ಯಾಯಾಧಿಕರಣದ ಹಿಡಿತಕ್ಕೆ ಒಳಪಡುವುದು ನಿಶ್ಚಿತ. 2033 ವರೆಗೆ ಇದೇ ವ್ಯವಸ್ಥೆ ಇರಲಿದೆ.

loader