ಸುವರ್ಣ ವೆಬ್ ಡೆಸ್ಕ್(ಸೆ.12): ತಮಿಳು ನಾಡಿನ ರಾಮೇಶ್ವರಂ'ನಲ್ಲಿ ಕನ್ನಡಿಗರಿಗೆ ಮೇಲಿನ ಹಲ್ಲೆ, ಆಸ್ತಿ ಪಾಸ್ತಿ ಹಾನಿ ಹಾಗೂ ಸುರ್ಪೀಂ ತೀರ್ಪು ಸಹ ಮತ್ತೇ ನೀರು ಬಿಡಬೇಕು ಎಂದು ತೀರ್ಪು ನೀಡಿರುವುದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ತಮಿಳುನಾಡಿನ ಲಾರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ತಮಿಳು ಮೂಲದವರ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಿದ್ದಾರೆ.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದ ಪಾಂಡವಪುರ, ಮದ್ದೂರು, ಮೈಸೂರು ನಗರ, ಬೆಂಗಳೂರಿನ ಮೈಸೂರು ರಸ್ತೆ, ಕೆಂಗೇರಿ ಉಪನಗರ, ಬಸವನಗುಡಿ, ನೈಸ್ ರಸ್ತೆ ಮುಂತಾದ ಕಡೆ ತಮಿಳುನಾಡಿನ ಲಾರಿಗಳನ್ನು ಸುಟ್ಟು ಹಾಕಿದ್ದಾರೆ.
ತಮಿಳರು ವಾಸಿಸುವ ಬೆಂಗಳೂರಿನ ಹಲವು ಕಡೆ ಹಾಗೂ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಕರವೇಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದ ಆಕ್ರೋಶ
ಕಾವೇರಿ ಕಣಿವೆಯ ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಅಲ್ಲದೆ ಚಿತ್ರದುರ್ಗಾ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿದೆ.
