ಬೆಂಗಳೂರು(ಸೆ.22): ಕಳೆದ ವಾರ ಕಾವೇರಿ ಗಲಾಟೆ ರಾಜ್ಯಾದ್ಯಂತ ಜೋರಾಗಿತ್ತು. ಸದ್ಯ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಭಾಗದಲ್ಲಿ ಶಾಂತ ಪರಿಸ್ಥಿತಿ ಇದೆ. ಆದರೆ, ಕಳೆದ 12ರಂದು ನಡೆದ ಕಾವೇರಿ ವಿಚಾರಕ್ಕೆ ಬೆಂಗಳೂರು ಹೊತ್ತಿ ಉರಿದಿತ್ತು. ರಸ್ತೆ ರಸ್ತೆಗಳಲ್ಲೂ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಕಾವೇರಿ ವಿಚಾರವನ್ನೇ ಬಳಸಿಕೊಂಡ ಕೆಲವು ಕಿಡಿಗೇಡಿಗಳು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು. 

ಇದಕ್ಕೆ ಪುಷ್ಠಿ ನೀಡುವ ದೃಶ್ಯಗಳು ಸುವರ್ಣ ನ್ಯೂಸ್​​ಗೆ ಲಭ್ಯವಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆ ವಾರ್ಡ್​​​​​​​​​​​​​​​​ನಲ್ಲಿ ಕೆಲವು ಯುವಕರು ಕೈಗೆ ಸಿಕ್ಕ ವಾಹನಗಳ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಘಟನೆಗೆ ಶಾಸಕ ಮುನಿರತ್ನ ಅವರೇ ಕಾರಣ ಅಂತ ಲಗ್ಗೆರೆ ವಾರ್ಡ್ ಕಾರ್ಪೋರೇಟರ್​ ಮಂಜುಳಾ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ . 

ವೇಲು ಗಾರ್ಡನ್​ ನಿವಾಸಿಗರಾದ ಕೆಲವರು ಈ ರೀತಿಯ ಗಲಭೆಗಳನ್ನ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವೇಲು ಗಾರ್ಡನ್​ ಬಳಿ ಇರೋ ಸಿಸಿಟಿವಿ ಕೂಡ ದೊರೆತಿದ್ದು, ಆ ದೃಶ್ಯಗಳಲ್ಲಿ ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ದ್ವಂಸ ನಡೆಸುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಇಷ್ಟಾದರು ಈ ಕಿಡಿಗೇಡಿಗಳ ವಿರುದ್ಧ ಯಾವುದೇ ಯಾವುದೇ ಕ್ರಮ ಕೂಡ ಕೈ ಗೊಂಡಿಲ್ಲ ಅಂತ ಮಂಜುಳಾ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ.