ಬೆಂಗಳೂರು (ಅ.07): ಕೇಂದ್ರ ಜಲಸಂಪನ್ಮೂಲ ಸಚಿವಾಲಯದಿಂದ ನೇಮಿಸಲಾಗಿರುವ ಜಿ.ಎಸ್​.ಝಾ ನೇತೃತ್ವದ ಉನ್ನತ ತಾಂತ್ರಿಕ ತಂಡವು ಇಂದು ಕಾವೇರಿಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಲಿದೆ.

ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರ್​ನಲ್ಲಿ ಮದ್ದೂರಿಗೆ ಭೇಟಿ ನೀಡಲಿರುವ ತಂಡವು ಬಳಿಕ ತೈಲೂರು, ಸೋಮನಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ವೀಕ್ಷಿಸಲಿದೆ.

ಮಧ್ಯಾಹ್ನ 1.30ಕ್ಕೆ ಮದ್ದೂರಿನ ಪ್ರವಾಸ ಮಂದಿರದಲ್ಲಿ ಊಟದ ಬಳಿಕ 2.45ಕ್ಕೆ ಮದ್ದೂರಿನ ಹನುಮಂತನಗರ, ದೊಡ್ಡರಸಿನಕೆರೆ, ಮಾದರಹಳ್ಳಿಕೆರೆ, ಅಚ್ಚುಕಟ್ಟುಪ್ರದೇಶಕ್ಕೆ ಭೇಟಿ ನೀಡಲಿದೆ.

ಬಳಿಕ ಮಳ್ಳವಳ್ಳಿ ತಾಲೂಕಿನ ಶೆಟ್ಟಹಳ್ಳಿ, ಕಿರುಗಾವಲು, ಮಳವಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ತಂಡವು ಸಂಜೆ 6 ಗಂಟೆಗೆ ಮದ್ದೂರಿನಿಂದ ಕೆಆರ್​ಎಸ್​ಗೆ ಹೊರಟು ಕೆಆರ್​ಎಸ್​ ನೀರಿನ ಮಟ್ಟ ಪರಿಶೀಲಿಸಲಿದೆ.