ನವದೆಹಲಿ[ಅ.17]: ದೇಶಾದ್ಯಂತ ಜಾನುವಾರುಗಳ ಸಂಖ್ಯೆ 53.578 ಕೋಟಿಗೆ ಹೆಚ್ಚಳವಾಗಿದ್ದು, ಇದರಲ್ಲಿ 2012ರ ಜಾನುವಾರುಗಳ ಸಮೀಕ್ಷೆಗೆ ಹೋಲಿಸಿದರೆ, ಪ್ರಸ್ತುತ ಸಮೀಕ್ಷೆಯಲ್ಲಿ 14.512 ಕೋಟಿ ಇರುವ ಗೋವುಗಳ ಸಂಖ್ಯೆ ಶೇ.18ರಷ್ಟು ಹೆಚ್ಚಳಗೊಂಡಿದೆ.

2019ನೇ ಸಾಲಿನ ಪಶುಸಂಪತ್ತು ಸಮೀಕ್ಷಾ ವರದಿ ಬುಧವಾರ ಬಿಡುಗಡೆಯಾಗಿದ್ದು, ಈ ಪ್ರಕಾರ ಗೋವು, ಕುರಿಗಳು, ಮೇಕೆ ಹಾಗೂ ಇನ್ನಿತರ ಪ್ರಾಣಿಗಳ ಸಂಖ್ಯೆ ಹೇರಳವಾಗಿದೆ. ಆದರೆ. ಕುದುರೆ, ಹಂದಿ, ಒಂಟೆ, ಕತ್ತೆ, ಹೇಸರಗತ್ತೆ, ಕಿರುಗುದುರೆ ಸೇರಿದಂತೆ ಇನ್ನಿತರ ಪ್ರಾಣಿಗಳ ಸಂಖ್ಯೆ ಇಳಿಮುಖವಾಗಿದೆ.

ದೇಶದಲ್ಲಿ ಒಟ್ಟಾರೆ ಪಶುಸಂಪತ್ತು ಸಂಖ್ಯೆ 53.578 ಕೋಟಿಗೆ ಏರಿಕೆಯಾಗುವ ಮೂಲಕ 2012ರ ಸಮೀಕ್ಷೆಗಿಂತ ಈ ಬಾರಿ ಪಶುಗಳ ಸಂಖ್ಯೆ ಶೇ.4ರಷ್ಟು ವೃದ್ಧಿಯಾಗಿವೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಹೇಳಿಕೆ ನೀಡಿದೆ.

ಅಲ್ಲದೆ, ಈ ವರದಿಯಲ್ಲಿ ಪಶುಗಳ ಸಂಖ್ಯೆ ಶೇ.35.94, ಮೇಕೆಗಳು ಶೇ.27.8, ಎಮ್ಮೆ ಶೇ.20.45, ಕುರಿಗಳು ಶೇ.13.87 ಮತ್ತು ಹಂದಿಗಳ ಸಂಖ್ಯೆ ಶೇ.1.69 ಆಗಿದೆ.