1 ದಿನದಲ್ಲಿ ಹಣದ ಕೊರತೆ ನಿವಾರಣೆ : ಎಸ್’ಬಿಐ

First Published 20, Apr 2018, 1:42 PM IST
Cash shortage problem to be resolved
Highlights

ಎಟಿಎಂಗಳಲ್ಲಿ ಉಂಟಾಗಿರುವ ಹಣದ ಕೊರತೆ ಇನ್ನು ಒಂದು ದಿನದಲ್ಲಿ ಪರಿಹಾರಗೊಳ್ಳಲಿದೆ. ನಗದು ಕೊರತೆ ಎದುರಾಗಿರುವ ಪ್ರದೇಶಗಳಿಗೆ ಹಣವನ್ನು ಈಗಾಗಲೇ ಸಾಗಿಸಲಾಗಿದೆ. ಶೇ.86ರಷ್ಟುಎಟಿಎಂಗಳಲ್ಲಿ ಹಣದ ಕೊರತೆ ನಿವಾರಣೆಯಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ನವದೆಹಲಿ: ಎಟಿಎಂಗಳಲ್ಲಿ ಉಂಟಾಗಿರುವ ಹಣದ ಕೊರತೆ ಇನ್ನು ಒಂದು ದಿನದಲ್ಲಿ ಪರಿಹಾರಗೊಳ್ಳಲಿದೆ. ನಗದು ಕೊರತೆ ಎದುರಾಗಿರುವ ಪ್ರದೇಶಗಳಿಗೆ ಹಣವನ್ನು ಈಗಾಗಲೇ ಸಾಗಿಸಲಾಗಿದೆ. ಶೇ.86ರಷ್ಟುಎಟಿಎಂಗಳಲ್ಲಿ ಹಣದ ಕೊರತೆ ನಿವಾರಣೆಯಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ದೇಶದ ಎಲ್ಲಾ ಕಡೆಗಳಲ್ಲೂ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿಲ್ಲ. ಆದರೆ, ತೆಲಂಗಾಣ ಮತ್ತು ಬಿಹಾರದಂತಹ ನಿರ್ದಿಷ್ಟರಾಜ್ಯಗಳಲ್ಲಿ ಮಾತ್ರ ಹಣದ ಕೊರತೆ ಎದುರಾಗಿದೆ. ಹಣದ ತೀವ್ರ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ಹಣವನ್ನು ಪೂರೈಸಲು ವಿಶೇಷ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. 2.2 ಲಕ್ಷ ಎಟಿಎಂಗಳ ಪೈಕಿ ಶೇ.86ರಷ್ಟುಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಶುಕ್ರವಾರದ ವೇಳೆಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ವೇಳೆ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಈ ವಾರದ ಆರಂಭದಲ್ಲಿ ಏಕಾಏಕಿ ಹಣಕ್ಕೆ ಭಾರೀ ಬೇಡಿಕೆ ಉಂಟಾಗಿದೆ. ಈ ತಿಂಗಳ ಆರಂಭದ 13 ದಿನಗಳಲ್ಲಿ 45,000 ಕೋಟಿ ರು. ನಗದಿನ ಬೇಡಿಕೆ ಇತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 2000 ರು. ನೋಟುಗಳು ಸಮರ್ಪಕವಾಗಿ ಲಭ್ಯವಾಗದೇ ಇರುವ ಕಾರಣಕ್ಕಾಗಿ ನಗದಿನ ಅಭಾವ ಎದುರಾಗಿದೆ. ಚುನಾವಣೆಗೂ ಮುನ್ನ ಕೆಲವು ವ್ಯಕ್ತಿಗಳು 2000 ರು. ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

loader