ದಾಖಲೆ ಇಲ್ಲದೇ ಖಾಸಗಿ ಬಸ್’ನಲ್ಲಿ ಸಾಗಿಸುತ್ತಿದ್ದ ಹಣ ವಶ

First Published 22, Apr 2018, 9:37 AM IST
Cash Seize in Devanahalli
Highlights

ದಾಖಲೆ ಇಲ್ಲದೆ ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 42 ಲಕ್ಷ ನಗದನ್ನು  ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಏಳರ ರಾಣಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.  ತಪಾಸಣೆ ವೇಳೆ ಆಂಧ್ರ ಕಡೆಯಿಂದ ಬಂದ ಕಲ್ಲಡ ಅನ್ನುವ ಖಾಸಗಿ ಬಸ್ ನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 42 ಲಕ್ಷ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  

ಬೆಂಗಳೂರು (ಏ. 22):  ದಾಖಲೆ ಇಲ್ಲದೆ ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 42 ಲಕ್ಷ ನಗದನ್ನು  ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಏಳರ ರಾಣಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.  ತಪಾಸಣೆ ವೇಳೆ ಆಂಧ್ರ ಕಡೆಯಿಂದ ಬಂದ ಕಲ್ಲಡ ಅನ್ನುವ ಖಾಸಗಿ ಬಸ್ ನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 42 ಲಕ್ಷ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  

ಕೇರಳ ಮೂಲದ ವ್ಯಕ್ತಿ ಹಣ ಸಾಗಿಸುತ್ತಿದ್ದ ಎನ್ನಲಾಗಿದೆ.  ಈ ವೇಳೆ ನಗದನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು  ವಿಚಾರಣೆ ನಡೆಸಿದ್ದಾರೆ. 

ಕಳೆದ ಮೂರು ದಿನಗಳಿಂದ ನಿರಂತರವಾಗಿ ಆಂಧ್ರದಿಂದ ಆಗಮಿಸುತ್ತಿರುವ ಖಾಸಗಿ ಬಸ್’ಗಳಲ್ಲಿ ಲಕ್ಷ ಲಕ್ಷ ದಾಖಲೆಯಿಲ್ಲದ ಹಣ ಸಿಗುತ್ತಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  

loader