50 ಕೋಟಿ ರು.ಗಿಂತ ಹೆಚ್ಚಿನ ಮೊತ್ತದ ಎಲ್ಲಾ ಸುಸ್ತಿ ಸಾಲಗಳನ್ನು ಸಂಭವನೀಯ ವಂಚನೆ ಪ್ರಕರಣ ಎಂದು ಪರಿಗಣಿಸಿ, ಅಂಥ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೂಚಿಸಿದೆ.

ನವದೆಹಲಿ: 50 ಕೋಟಿ ರು.ಗಿಂತ ಹೆಚ್ಚಿನ ಮೊತ್ತದ ಎಲ್ಲಾ ಸುಸ್ತಿ ಸಾಲಗಳನ್ನು ಸಂಭವನೀಯ ವಂಚನೆ ಪ್ರಕರಣ ಎಂದು ಪರಿಗಣಿಸಿ, ಅಂಥ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿಎನ್‌ಬಿ ವಂಚನೆ ಸೇರಿದಂತೆ ಹಲವು ಬ್ಯಾಂಕ್‌ ವಂಚನೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

ಪಿಎಸ್‌ಬಿಗಳು ಕೇಂದ್ರೀಯ ತನಿಖಾ ಸಂಸ್ಥೆಗಳೊಂದಿಗೆ ಇಂತಹ ವಂಚನೆಗಳ ತನಿಖೆಗೆ ಕೈಜೋಡಿಸುವಂತೆಯೂ ಕೋರಲಾಗಿದೆ. ಎಲ್ಲ ಪಿಎಸ್‌ಬಿಗಳಲ್ಲಿ ಸುಮಾರು 8.5 ಲಕ್ಷ ಕೋಟಿ ರು. ಮೌಲ್ಯದ ಅನುತ್ಪಾದಕ ಆಸ್ತಿ ಖಾತೆಗಳು ಘೋಷಣೆಯಾಗಿವೆ.