ನಾವು ರಾಜು ಕುಟುಂಬವನ್ನ ಭೇಟಿ ಮಾಡಿ ವರದಿ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಕೆಬಿ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು(ಏ.03): ಮೃತ ರಾಜು ಕುಟುಂಬಕ್ಕೆ ಅಮಿತ್ ಶಾ 5 ಲಕ್ಷ ರೂ. ಪರಿಹಾರ ಭರವಸೆ ಘೋಷಣೆ ಹಿನ್ನೆಲೆಯಲ್ಲಿ ದೆಹಲಿಯ ಚುನಾವಣಾ ಆಯೋಗದಲ್ಲಿ ಅಮಿತ್ ಶಾ ವಿರುದ್ಧ ದೂರು ದಾಖಲಾಗಿದೆ.

ದೆಹಲಿಯ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದು ದೆಹಲಿಯ ಚುನಾವಣಾ ಆಯೋಗ ಬೆಂಗಳೂರಿನ ಚುನಾವಣಾ ಆಯೋಗಕ್ಕೆ ಕೇಸ್ ವರ್ಗಾಯಿಸಿದೆ. ಪ್ರಕರಣ ಸಂಬಂಧ ಕುಟುಂಬದವರನ್ನು ಭೇಟಿ ಮಾಡಿ ವರದಿ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ನಾವು ರಾಜು ಕುಟುಂಬವನ್ನ ಭೇಟಿ ಮಾಡಿ ವರದಿ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಕೆಬಿ ಶಿವಕುಮಾರ್ ತಿಳಿಸಿದ್ದಾರೆ.

ಮತದಾರರನ್ನ ಸೆಳೆಯಲು ನಾಯಕರು ಚುನಾವಣಾಧಿಕಾರಿಗಳ ಮುಂದಾಗಿದ್ದಾರೆ. ಮತದಾರರಿಗೆ ಊಟ ಹಾಕಲು ಅನುಮತಿ ಕೇಳುತ್ತಿದ್ದಾರೆ. ಗಣ್ಯ ವ್ಯಕ್ತಿಗಳು ನನಗೆ ಫೋನ್ ಮಾಡಿ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅದ್ಯಾವುದಕ್ಕೂ ನಾವಿನ್ನೂ ಅನುಮತಿ ಕೊಟ್ಟಿಲ್ಲ ಎಂದು ಕೆಬಿ ಶಿವಕುಮಾರ್ ಹೇಳಿದ್ದಾರೆ.