ಗೆಳತಿಗೆ ಮನಬಂದಂತೆ ಥಳಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ..!

Case Against Actor Armaan Kohli For Assaulting Live-In Partner
Highlights

ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಮಾನ್ ಕೊಹ್ಲಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ತಮ್ಮ ಗೆಳತಿ ನೀರೂ ರಂಧಾವಾ ಅವರ ಮೇಲೆ ಅರ್ಮಾನ್ ದೈಹಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಅವರ ವಿರುದ್ದ ದೂರು ದಾಖಲಾಗಿದೆ.

ಮುಂಬೈ(ಜೂ.5): ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಮಾನ್ ಕೊಹ್ಲಿ ತಮ್ಮ ಗೆಳತಿ ನೀರೂ ರಾಂಧಾವಾ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಮುಂಬೈನ ಸಂತಾಕ್ರೂಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ವರ್ಷಗಳಿಂದ ಅರ್ಮಾನ್ ಕೊಹ್ಲಿ ಮತ್ತು ನೀರೂ ಸಹಜೀವನ ನಡೆಸುತ್ತಿದ್ದರು.

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಗೋವಾದಲ್ಲಿ ವಿಲ್ಲಾ ಒಂದನ್ನು ಖರೀಸುವ ವಿಚಾರವಾಗಿ ಇಬ್ಬರ ನಡುವೆ ಜಗಳ ತಾರಕ್ಕೇರಿತ್ತು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಭಾನುವಾರ ರಾತ್ರಿ ಸಹ ಜಗಳ ನಡೆದಿದ್ದು, ನೀರೂ ಅವರನ್ನು ಜೋರಾಗಿ ತಳ್ಳಿದ ಕಾರಣ ಆಕೆ ಮೆಟ್ಟಿಲ ಮೇಲಿಂದ ಉರುಳುತ್ತಾ ಕೆಳಗೆ ಬಿದ್ದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಅರ್ಮಾನ್, ಆಕೆಯ ಕೂದಲು ಹಿಡಿದು ತಲೆಯನ್ನು ನೆಲಕ್ಕೆ ಜೋರಾಗಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೆ ಬೇಡಿಕೊಂಡರೂ ಕೊಹ್ಲಿ ಕೇಳಿಸಿಕೊಂಡಿಲ್ಲ. ಬಹಳ ಸಮಯದ ಬಳಿಕ ಸ್ವತಃ ಅವರೇ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅರ್ಮಾನ್ ಗಾಗಿ ಹುಡುಕಾಟ ಆರಂಭಿಸಿದ್ದು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

loader