ಬಿದ್ದವನ ಬೆನ್ನ ಮೇಲೆ ಹಾಕ್ಕೊಂಡು 2.5 ಕಿ.ಮೀ. ಓಡಿದ ಸೇನಾ ಕೆಡೆಟ್‌

Cadet carries junior for 2km to complete run
Highlights

ಯೋಧರಿಗೆ ಯುದ್ಧ ಗೆಲ್ಲಲು ಸಂಘಟಿತ ಶಕ್ತಿಯ ಅಗತ್ಯ ಸದಾ ಇರುತ್ತದೆ. ಸಹಯೋಧ ಅಪಾಯದಲ್ಲಿದ್ದಾಗ, ಆತನ ಕಾಪಾಡುವುದು ಯೋಧನ ಕರ್ತವ್ಯವೂ ಹೌದು. ಅಂತಹುದೇ ಸನ್ನಿವೇಶದಲ್ಲಿ, ಖಡಕ್‌ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಯ ಕ್ರಾಸ್‌ಕಂಟ್ರಿ ರಸ್ತೆ ಓಟದಲ್ಲಿ ಕೆಡೆಟ್‌ ಒಬ್ಬರು ತೆಗೆದುಕೊಂಡ ದಿಟ್ಟನಿರ್ಧಾರ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ನವದೆಹಲಿ: ಯೋಧರಿಗೆ ಯುದ್ಧ ಗೆಲ್ಲಲು ಸಂಘಟಿತ ಶಕ್ತಿಯ ಅಗತ್ಯ ಸದಾ ಇರುತ್ತದೆ. ಸಹಯೋಧ ಅಪಾಯದಲ್ಲಿದ್ದಾಗ, ಆತನ ಕಾಪಾಡುವುದು ಯೋಧನ ಕರ್ತವ್ಯವೂ ಹೌದು. ಅಂತಹುದೇ ಸನ್ನಿವೇಶದಲ್ಲಿ, ಖಡಕ್‌ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಯ ಕ್ರಾಸ್‌ಕಂಟ್ರಿ ರಸ್ತೆ ಓಟದಲ್ಲಿ ಕೆಡೆಟ್‌ ಒಬ್ಬರು ತೆಗೆದುಕೊಂಡ ದಿಟ್ಟನಿರ್ಧಾರ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸೇನಾ ಅಕಾಡೆಮಿ ಪಠ್ಯಕ್ರಮದಲ್ಲಿ 13.8 ಕಿ.ಮೀ. ಕ್ರಾಸ್‌ಕಂಟ್ರಿ ಓಟ ಅತ್ಯಂತ ಮುಖ್ಯವಾದುದು. ಫೆ. 10ರಂದು ನಡೆದ ಓಟದಲ್ಲಿ ಕೆಡೆಟ್‌ ಚಿರಾಗ್‌ ಅರೋರಾ, ಓಡುತ್ತಿದ್ದಾಗ ಗುರಿ ತಲುಪಲು ಇನ್ನೂ 2.5 ಕಿ.ಮೀ. ಇರುವಾಗ ಕಿರಿಯ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದನ್ನು ಗಮನಿಸಿದರು. ಅರೋರಾ ತಮ್ಮ ಗುರಿ ತಲುಪಬೇಕಾದ ಸಮಯ ಮಿತಿಯನ್ನು ಲೆಕ್ಕಿಸದೆ, ಬಿದ್ದಿದ್ದ ವಿದ್ಯಾರ್ಥಿಯನ್ನು ಎತ್ತಿ ತಮ್ಮ ಬೆನ್ನಮೇಲೆ ಹೇರಿಕೊಂಡು ಗುರಿಯತ್ತ ಓಡಿ, ಗುರಿ ಪೂರ್ಣಗೊಳಿಸಿದ್ದರು.

ಅರೋರಾರ ಈ ನಡೆ ಎಲ್ಲ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಲೆ.ಜ. ಅಲೋಕ್‌ ಕ್ಲೇರ್‌, ರೇಬಾನ್‌ ಸನ್‌ಗ್ಲಾಸ್‌ ಒಂದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಯಾವ ವ್ಯಕ್ತಿಯೂ ಹಿಂದೆ ಬೀಳದಂತೆ ನೋಡಿಕೊಳ್ಳುವುದು ಸೇನಾ ಸ್ಫೂರ್ತಿ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಂಬಾಲ ಎಚ್‌ಕ್ಯೂ2 ಕಾಫ್ಸ್‌ರ್‍ನ ಮುಖ್ಯಸ್ಥ ಕ್ಲೇರ್‌ ಹೇಳಿದ್ದಾರೆ.

loader