ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಷ್ ಆಗಿದ್ದು, ಮೂವರು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗೋದು ಖಚಿತವಾಗಿದೆ. ಯಾರ್ಯಾರು ಸಂಪುಟಕ್ಕೆ ಸೇರ್ಪಡೆ ಆಗ್ತಾರೆ ಅಂತೀರಾ? ಇಲ್ಲಿದೆ ವಿವರ.
ಬೆಂಗಳೂರು(ಆ.18): ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು. ಆಗಸ್ಟ್ 21 ರಂದು ಮೂವರು ಹೊಸ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಅಲ್ದೇ ರಮಾನಾಥ್ ರೈಗೆ ಗೃಹ ಖಾತೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಯಾರ್ಯಾರಿಗೆ ಸಚಿವ ಸ್ಥಾನ..?
ಈಗಿನ ಮಾಹಿತಿ ಪ್ರಕಾರ ಕುರುಬ ಸಮುದಾಯಕ್ಕೆ ಸೇರಿರುವ ಎಚ್ ಎಂ ರೇವಣ್ಣ, ಲಿಂಗಾಯಿತ ಸಮುದಾಯಕ್ಕೆ ಸೇರಿರುವ ತಿಪಟೂರು ಶಾಸಕ ಷಡಕ್ಷರಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ದಲಿತ ಕೋಟಾದಲ್ಲಿ ಬಲಗೈ ಗುಂಪಿಗೆ ಸೇರಿರುವ ಮಳವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಮತ್ತು ಎಡಗೈ ಗುಂಪಿಗೆ ಸೇರಿರುವ ವಿಧಾನ ಪರಿಷತ್ ಸದಸ್ಯ ಸದಸ್ಯ ಆರ್ ಬಿ ತಿಮ್ಮಾಪುರ ನಡುವೆ ಪೈಪೋಟಿ ಇದ್ದು ಇಬ್ಬರಲ್ಲಿ ಒಬ್ಬರು ಮಂತ್ರಿ ಆಗಲಿದ್ದಾರೆ.
ಎಚ್ ವೈ ಮೇಟಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಎಚ್.ಎಂ ರೇವಣ್ಣ, ಮಹದೇವ ಪ್ರಸಾದ್ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಷಡಕ್ಷರಿ ಮತ್ತು ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ದಲಿತ ಸಮುದಾಯ.. ಹೀಗೆ ಚುನಾವಣೆಗೆ ಮೊದಲು ಜಾತಿ ಲೆಕ್ಕಾಚಾರಗಳನ್ನು ಸಿದ್ಧರಾಮಯ್ಯ ಸಹಜವಾಗಿ ಹಾಕಿದ್ದಾರೆ. ಇನ್ನು ವಿಮಲಾ ಗೌಡ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ, ಮುನಿಸಿಕೊಂಡಿರುವ ಸಿಎಂ ಮಿತ್ರ ಸಿ ಎಂ ಇಬ್ರಾಹಿಂ ಅವರನ್ನು ನೇಮಕ ಮಾಡಲು ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಹಸಿರು ನಿಶಾನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಆಗಸ್ಟ್ 21 ರಂದು ಸಂಪುಟ ವಿಸ್ತರಣೆ ಆಗೋದು ಕನ್ಫರ್ಮ್ ಆಗಿದ್ದು, ಮೂವರು ಸೇಪುಟಕ್ಕೆ ಸೇರೋದು ಖಚಿತವಾಗಿದೆ.
