ಸಂಪುಟ ವಿಸ್ತರಣೆಗೆ ದಿನಗಣನೆ ಶುರುವಾದಂತೆ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಮೊದಮೊದಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚೇನೂ ಇರಲಿಲ್ಲ.
ಬೆಂಗಳೂರು(ಜೂ.25): ಸಂಪುಟ ವಿಸ್ತರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ಚರ್ಚಿಸಲು ಇದೇ 28ಕ್ಕೆ ದೆಹಲಿಗೆ ತೆರಳುತ್ತಿದ್ದಾರೆ. ಇದೇ ವೇಳೆ, ಮಂತ್ರಿ ಸ್ಥಾನಕ್ಕಾಗಿ ಅನೇಕ ಶಾಸಕರು ತೀವ್ರ ಲಾಬಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಮುಖ್ಯಮಂತ್ರಿಗಳು ಭಾರೀ ಕಸರತ್ತು ನಡೆಸಿದ್ದಾರೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡೋದಾಗಿ ಹೇಳಿದ್ದರು. ಇದೀಗ ಅಧಿವೇಶನ ಮುಗಿದಿದ್ದು, ಖಾಲಿ ಇರುವ ಮೂರು ಸ್ಥಾನ ಭರ್ತಿ ಮಾಡೋ ಕಾರ್ಯದಲ್ಲಿ ಸಿಎಂ ತಲ್ಲೀಣರಾಗಿದ್ದಾರೆ.
ಸಂಪುಟ ವಿಸ್ತರಣೆಗೆ ದಿನಗಣನೆ ಶುರುವಾದಂತೆ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಮೊದಮೊದಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಆದರೆ, ಕೆಲ ದಿನಗಳಿಂದ ಮಂತ್ರಿ ಸ್ಥಾನದ ಕನಸು ಕಾಣುತ್ತಿರುವವರ ಸಂಖ್ಯೆ ಹನುಮಂತನ ಬಾಲದಂತೆ ಬೆಳಿತಾನೇ ಇದೆ. ಮೊದಲು ನಾಲ್ಕೈದು ಹೆಸರು ಮಾತ್ರ ಕೇಳಿ ಬಂದಿದ್ವು. ಇದೀಗ ಈ ಸಂಖ್ಯೆ 20ಕ್ಕೂ ಹೆಚ್ಚಿದೆ.
ಆಕಾಂಕ್ಷಿಗಳು
ಹೆಚ್. ಎಂ. ರೇವಣ್ಣ,
ಷಡಕ್ಷರಿ
ನರೇಂದ್ರಸ್ವಾಮಿ
ಗೋವಿಂದಪ್ಪ
ಸಿ.ಎಸ್.ಶಿವಳ್ಳಿ
ಮೋಟಮ್ಮ
ಅಶೋಕ ಪಟ್ಟಣ
ಆರ್.ಬಿ. ತಿಮ್ಮಾಪುರ
ಯಾವ ಸಮುದಾಯದ ಮುಖಂಡರಿಂದ ಮಂತ್ರಿ ಸ್ಥಾನ ಖಾಲಿಯಾಗಿದೆ, ಅದೇ ಜಾತಿಯ ಮುಖಂಡರನ್ನು ತರುವ ಚಿಂತನೆ ಸಿದ್ದರಾಮಯ್ಯರದ್ದು. ಪರಮೇಶ್ವರ್, ಮಹದೇವ ಪ್ರಸಾದ್ ಮತ್ತು ಹೆಚ್ ವೈ ಮೇಟಿಯಿಂದ ಸ್ಥಾನ ತೆರುವಾಗಿದೆ. ಹಾಗಾಗಿ ದಲಿತ, ಲಿಂಗಾಯತ ಮತ್ತು ಕುರುಬ ಸಮುದಾಯದ ಮುಖಂಡರನ್ನೇ ತರುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ. ಹಾಗಾಗಿ ಆಕಾಂಕ್ಷಿಗಳಲ್ಲಿ ಯಾರಿ ಮಂತ್ರಿಯಾಗ್ತಾರೆ ಅನ್ನೋದು ವಿಸ್ತರಣೆ ಬಳಿಕವೇ ಗೊತ್ತಾಗಲಿದೆ.
