ಕೇಂದ್ರಗಳಲ್ಲೂ ಕೂಡ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು ನವೆಂಬರ್ 17ರ ಒಳಗಾಗಿ ಸ್ಥಳ ಗುರುತಿಸಿ, ಡಿಸೆಂಬರ್ 17ರ ಒಳಗಾಗಿ ಕ್ಯಾಂಟೀನ್​ಗಳ ನಿರ್ಮಿಸಿ ಜನವರಿ ಒಂದರಂದು ಎಲ್ಲ ಇಂದಿರಾ ಕ್ಯಾಂಟೀನ್​ಗಳ ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ.

ಬೆಂಗಳೂರು(ಅ.11) : ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಬೆಂಗಳೂರಿನ ವಿಧಾನಸೌಧದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 246 ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಕೂಡ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು ನವೆಂಬರ್ 17ರ ಒಳಗಾಗಿ ಸ್ಥಳ ಗುರುತಿಸಿ, ಡಿಸೆಂಬರ್ 17ರ ಒಳಗಾಗಿ ಕ್ಯಾಂಟೀನ್​ಗಳ ನಿರ್ಮಿಸಿ ಜನವರಿ ಒಂದರಂದು ಎಲ್ಲ ಇಂದಿರಾ ಕ್ಯಾಂಟೀನ್​ಗಳ ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳ ವಿವರ ಇಲ್ಲಿದೆ

ತಜ್ಞವೈದ್ಯರ ಕೊರತೆ ನೀಗಿಸಲು ರಾಜ್ಯಸರ್ಕಾರದಿಂದಲೇ ಡಿಎನ್'ಬಿ ಕೋರ್ಸ್

ರಾಜ್ಯದ 10 ಕಡೆ ಡಿಎನ್​ಬಿ ಕೋರ್ಸ್​ ಆರಂಭಿಸಲು ಸಂಪುಟ ಒಪ್ಪಿಗೆ

95 108 ಅಂಬ್ಯುಲೆನ್ಸ್ ಗಳ ಖರೀದಿಗೆ ಸಂಪುಟ ಒಪ್ಪಿಗೆ

276 ಲೈಫ್ ಸಪೋರ್ಟಿಂಗ್ ಅಂಬ್ಯುಲೆನ್ಸ್ ಗಳ ಖರೀದಿಗೂ ನಿರ್ಧಾರ

543 ವಸತಿ ಗೃಹಗಳ ೧೫೩ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ

ನ್ಯಾಯಬೆಲೆ ಅಂಗಡಿಗಳ ಜಾಗೃತ ಸಮಿತಿಗಳ ಸದಸ್ಯರಿಗೆ ತರಬೇತಿ ನೀಡಲು ಗೌರವ ಧನ

ತಾಲೂಕು‌‌ ಮಟ್ಟದ ಸದಸ್ಯರಿಗೆ ೧೫೫ ರೂ ಹಾಗೂ ಗ್ರಾಮ ಮಟ್ಟದ ಸದಸ್ಯರಿಗೆ 75 ರೂ

ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಾಗ್ರಿ ಹಾಗೂ ಟೂಲ್ ಕಿಟ್

ಐಟಿಐ ತರಬೇತಿದಾರರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ನೀಡಲು ಸಂಪುಟ ಒಪ್ಪಿಗೆ

46 ಐಟಿಐ ಕಾಲೇಜು ಮೇಲ್ದರ್ಜೆಗೆ ಏರಿಸಲು 2017 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತು ಗಳ ಖರೀದಿಗೆ ಹಣ ಬಿಡುಗಡೆ ಒಪ್ಪಿಗೆ

ವರದಾ ಹಾಗೂ ಕುಮದ್ವತಿ ನದಿಯಿಂದ ನೀರು ಎತ್ತಿ ತುಂಬಿಸುವ ಕೆರೆ ತುಂಬಿಸುವ ಯೋಜನೆಗೆ ಸಂಪುಟ ಒಪ್ಪಿಗೆ

ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಂಪುಟ ಒಪ್ಪಿಗೆ

ಮೂಡಲಗಿಯನ್ನು ನೂತನ ತಾಲೂಕು‌ ಮಾಡಲು ಸಂಪುಟ ಒಪ್ಪಿಗೆ

ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಗೆ ಸಂಪುಟ ಒಪ್ಪಿಗೆ

ನವೆಂಬರ್ 13 ರಿಂದ 23ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ತೀರ್ಮಾನ

ವಜ್ರ ಮಹೋತ್ಸವದ ವಿಶೇಷ ಅಧಿವೇಶನವನ್ನು ಇದೇ 25-26ರಂದು ನಡೆಸಲು ಸಂಪುಟ ತಾತ್ವಿಕ ಒಪ್ಪಿಗೆ

ಹಾವೇರಿ ಜಿಲ್ಲೆಯ ಹಿರೆಕೇರೂರು ಬಹುಗ್ರಾಮಗಳಿಗೆ ಕುಮದ್ವತಿ ನದಿಯಿಂದ ಕುಡಿಯುವ ನೀರು ಹರಿಸಲು 24 ಕೋಟಿ ಬಿಡುಗಡೆ ಗೆ ಆಡಳಿತಾತ್ಮಕ ಅನುಮೋದನೆ

ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆಗೆ ಒಪ್ಪಿಗೆ