ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 233 ಸ್ಥಾನ ಗಳಿಸಿ, ಕೇವಲ 39 ಸ್ಥಾನಗಳಿಂದ ಬಹುಮತದಿಂದ ವಂಚಿತವಾಗಲಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ 167 ಸ್ಥಾನಗಳನ್ನು ಗೆಲ್ಲುವ ಮೂಲಕ 105 ಸ್ಥಾನಗಳ ಅಂತರದಿಂದ ಬಹುಮತದಿಂದ ದೂರ ಉಳಿಯಲಿದೆ ಎನ್ನಲಾಗಿದೆ. 

ನವದೆಹಲಿ: ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸ್ಪಷ್ಟಬಹುಮತ ಲಭಿಸುವುದಿಲ್ಲ. ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಲಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ, ಯುಪಿಎ ಕಳೆದ ಬಾರಿಗಿಂತ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಳ್ಳಲಿದೆ ಎಂದು ರಿಪಬ್ಲಿಕ್‌ ಟೀವಿ ಚಾನಲ್‌ ಹಾಗೂ ಸಿ ವೋಟರ್‌ ಸಂಸ್ಥೆಗಳು ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ 233 ಸ್ಥಾನ ಗಳಿಸಿ, ಕೇವಲ 39 ಸ್ಥಾನಗಳಿಂದ ಬಹುಮತದಿಂದ ವಂಚಿತವಾಗಲಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ 167 ಸ್ಥಾನಗಳನ್ನು ಗೆಲ್ಲುವ ಮೂಲಕ 105 ಸ್ಥಾನಗಳ ಅಂತರದಿಂದ ಬಹುಮತದಿಂದ ದೂರ ಉಳಿಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಉತ್ತರಪ್ರದೇಶದಲ್ಲಿ ವೈರತ್ವ ಮರೆತು ಒಂದಾಗಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಕ್ಕೆ ಭರ್ಜರಿ ಲಾಭ ದೊರೆಯಲಿದೆ. ಈ ಎರಡೂ ಪಕ್ಷಗಳು 51 ಸ್ಥಾನಗಳನ್ನು ಗೆಲ್ಲಲಿವೆ. ಕಳೆದ ಬಾರಿ 71 ಸ್ಥಾನ ಗೆದ್ದಿದ್ದ ಬಿಜೆಪಿ 25ಕ್ಕೆ ಕುಸಿಯಲಿದೆ. ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಯಾವ ರಾಜ್ಯದಲ್ಲಿ ಯಾರಿಗೆಷ್ಟುಸ್ಥಾನ?:

ಮಹಾರಾಷ್ಟ್ರ: ಎನ್‌ಡಿಎ- 20, ಯುಪಿಎ- 28

ಬಿಹಾರ: ಎನ್‌ಡಿಎ- 35, ಯುಪಿಎ- 5

ಉತ್ತರಪ್ರದೇಶ: ಎಸ್ಪಿ+ಬಿಎಸ್ಪಿ- 51, ಬಿಜೆಪಿ- 25, ಕಾಂಗ್ರೆಸ್‌- 4

ಆಂಧ್ರಪ್ರದೇಶ: ವೈಎಸ್ಸಾರ್‌ ಕಾಂಗ್ರೆಸ್‌- 19, ತೆಲುಗುದೇಶಂ- 6

ಪಶ್ಚಿಮ ಬಂಗಾಳ: ಟಿಎಂಸಿ- 34, ಬಿಜೆಪಿ 7, ಕಾಂಗ್ರೆಸ್‌- 1

ಗುಜರಾತ್‌: ಎನ್‌ಡಿಎ- 24, ಕಾಂಗ್ರೆಸ್‌- 2

ದೆಹಲಿ: ಬಿಜೆಪಿ- 7, ಆಪ್‌- 0

ಎಬಿಪಿ ನ್ಯೂಸ್‌- ಸಿ ವೋಟರ್‌ ಸಮೀಕ್ಷೆ

ಯಾರಿಗೆಷ್ಟುಸೀಟು?

ಒಟ್ಟು ಸ್ಥಾನ- 543

ಬಹುಮತ- 272

ಕೂಟ ಸಂಭಾವ್ಯ ಸ್ಥಾನ 2014

ಎನ್‌ಡಿಎ 233 336

ಯುಪಿಎ 161 60

ಇತರರು 143