ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದ್ದು,ಈ ಬಗ್ಗೆ ಇದೀಗ ಅಪಸ್ವರ ಎದ್ದಿದೆ.
ಬೆಂಗಳೂರು : ಈಗಾಗಲೇ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಗ ಘೋಷಣೆಯಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಅಸಮಾಧಾನ ಕೇಳಿಬರುತ್ತಿದೆ.
ದಿನೇಶ್ ಗುಂಡೂರಾವ್, ಸುರೇಶ್ ಕುಮಾರ್ ಬಳಿಕ ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಇದೀಗ ಲೋಕಸಭಾ ಉಪಚುನಾವಣೆಗೆ ಅಪಸ್ವರ ಎತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದು, ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಯಿಂದ ಅಂತರ ಕಾಯ್ದುಕೊಳ್ಳುವಂತೆ ಮೈತ್ರಿ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ನಿರ್ಧಾರ ಪ್ರತಿಭಟಿಸಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಲೋಕಸಭಾ ಚುನಾವಣಗೆ ಕೇವಲ ನಾಲ್ಕು ತಿಂಗಳಿರುವ ಚುನಾವಣೆ ನಡೆಸಿ ತೆರಿಗೆ ದಾರನ ಹಣ ಏಕೆ ವ್ಯರ್ಥವಾಗಬೇಕು ಅವರು ಹೇಳಿದ್ದಾರೆ.
ಚುನಾವಣೆ ತಡೆಯಬಹುದು
ಇನ್ನು ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಘೋಷಣೆಯಾದ ಚುನಾವಣೆಯನ್ನು ತಡೆಯಬಹುದಾಗಿದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಸ್ಪಷ್ಟಪಡಿಸಿದ್ದಾರೆ. ಸಾವತ್ರಿಕ ಚುನಾವಣೆ ನಾಲ್ಕೈದು ತಿಂಗಳು ಬಾಕಿಯಿರುವಾಗ ಚುನಾವಣೆ ನಡೆಸೋದು ವೆಚ್ಚದಾಯಕ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.
ರೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್ 151 (ಎ) ಅಡಿಯಲ್ಲಿ ಚುನಾವಣೆ ತಡೆಯಬಹುದಾಗಿದೆ. 151 ಎ ಪ್ರಕಾರ ಉಳಿದ ಲೋಕಸಭೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಕೇಳಿಕೊಂಡಲ್ಲಿ ಚುನಾವಣೆ ತಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
