ಪ್ರಧಾನಿ ನರೇಂದ್ರ ಮೋದಿ ನ.8ರಂದು ನೋಟು ರದ್ದು ಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ. ಕೇಂದ್ರ ಸರಕಾರದ ಕ್ರಮಕ್ಕೆ ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದು ಈ ಚುನಾವಣೆಗಳಿಂದ ತಿಳಿದುಬರುವ ಸಾಧ್ಯತೆ ಇದೆ.
ನವದೆಹಲಿ(ನ. 22): ಮೂರು ದಿನಗಳ ಹಿಂದೆ ದೇಶಾದ್ಯಂತ ಕೆಲ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. 4 ಸಂಸತ್ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ನ.19ರಂದು ಉಪಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮಧ್ಯಾಹ್ನದಷ್ಟರಲ್ಲಿ ಎಲ್ಲ ಫಲಿತಾಂಶ ಹೊರಬೀಳಲಿದೆ.
ಸದ್ಯ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ತಲಾ 2 ಕ್ಷೇತ್ರಗಳನ್ನು ಜಯಿಸಿದ್ದವು. ಇನ್ನು, 10 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕಳೆದ ಬಾರಿ 4ರಲ್ಲಿ ಜಯಿಸಿತ್ತು. ಬಿಜೆಪಿ, ಟಿಎಂಸಿ, ಎಐಎಡಿಎಂಕೆ ಮತ್ತು ಸಿಪಿಐ-ಎಂ ಪಕ್ಷಗಳು ತಲಾ ಒಂದೊಂದರಲ್ಲಿ ಜಯಿಸಿದ್ದವು. ಇನ್ನೆರಡು ಕ್ಷೇತ್ರಗಳಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 14 ಉಪಚುನಾವಣೆಗಳು ಬಹಳ ಮಹತ್ವ ಪಡೆದಿವೆ.. ಅದರಲ್ಲೂ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ ಮತ್ತು ಟಿಎಂಸಿ ಪಕ್ಷಗಳಿಗೆ ಇವು ಅಗ್ನಿಪರೀಕ್ಷೆಗಳೆನಿಸಿವೆ.
ಪ್ರಧಾನಿ ನರೇಂದ್ರ ಮೋದಿ ನ.8ರಂದು ನೋಟು ರದ್ದು ಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ. ಕೇಂದ್ರ ಸರಕಾರದ ಕ್ರಮಕ್ಕೆ ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದು ಈ ಚುನಾವಣೆಗಳಿಂದ ತಿಳಿದುಬರುವ ಸಾಧ್ಯತೆ ಇದೆ.
ಯಾವ್ಯಾವ ಕ್ಷೇತ್ರಗಳಿಗೆ ಉಪಚುನಾವಣೆ?
ಲೋಕಸಭಾ ಕ್ಷೇತ್ರಗಳು ಹಾಗೂ ಹಾಲಿ ವಿಜೇತರು:
1) ಲಖೀಂಪುರ್, ಅಸ್ಸಾಮ್ - ಬಿಜೆಪಿ
2) ಶಾಹದೋಲ್, ಮಧ್ಯಪ್ರದೇಶ - ಬಿಜೆಪಿ
3) ಕೂಚ್ ಬಿಹಾರ್, ಪ.ಬಂಗಾಳ - ಟಿಎಂಸಿ
4) ತಾಮಲುಕ್, ಪ.ಬಂಗಾಳ - ಟಿಎಂಸಿ
ವಿಧಾನಸಭಾ ಕ್ಷೇತ್ರಗಳು ಹಾಗೂ ಹಾಲಿ ವಿಜೇತರು:
1) ಬೈತಾಲಾಂಗ್ಸೋ, ಅಸ್ಸಾಮ್ - ಕಾಂಗ್ರೆಸ್
2) ಹಾಯುಲಿಯಾಂಗ್, ಅರುಣಾಚಲಪ್ರದೇಶ - ಕಾಂಗ್ರೆಸ್
3) ನೆಪಾನಗರ್, ಮಧ್ಯಪ್ರದೇಶ - ಬಿಜೆಪಿ
4) ಮೋಂಟೇಶ್ವರ್, ಪ.ಬಂಗಾಳ - ಟಿಎಂಸಿ
5) ತಂಜಾವೂರ್, ತಮಿಳುನಾಡು -
6) ಅರವಕ್ಕುರಿಚಿ, ತಮಿಳುನಾಡು -
7) ತಿರುಪ್ರರನ್'ಕುಂಡ್ರಂ, ತಮಿಳುನಾಡು - ಎಐಎಡಿಎಂಕೆ
8) ನೆಲ್ಲಿತೋಪ್, ಪುದುಚೇರಿ - ಕಾಂಗ್ರೆಸ್
9) ಬರ್ಜಾಲಾ, ತ್ರಿಪುರಾ - ಕಾಂಗ್ರೆಸ್
10) ಖೊವಾಯ್, ತ್ರಿಪುರಾ - ಸಿಪಿಐ-ಎಂ
