ಸುಮಾರು 12,000 ಕೋಟಿ ರು. ಮೌಲ್ಯದ ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ನೀರವ್‌ ಮೋದಿಗೆ ಸೇರಿದ ಉದ್ಯಮ ಸಂಸ್ಥೆಗಳ ಖರೀದಿಗೆ ಅಮೆರಿಕದ ಸಂಭಾವ್ಯ ಖರೀದಿದಾರರು ಆಸಕ್ತಿ ತೋರಿದ್ದಾರೆ.

ನವದೆಹಲಿ: ಸುಮಾರು 12,000 ಕೋಟಿ ರು. ಮೌಲ್ಯದ ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ನೀರವ್‌ ಮೋದಿಗೆ ಸೇರಿದ ಉದ್ಯಮ ಸಂಸ್ಥೆಗಳ ಖರೀದಿಗೆ ಅಮೆರಿಕದ ಸಂಭಾವ್ಯ ಖರೀದಿದಾರರು ಆಸಕ್ತಿ ತೋರಿದ್ದಾರೆ.

ಫೈರ್‌ಸ್ಟಾರ್‌ ಡೈಮಂಡ್‌ ಕಂಪೆನಿ ಈ ಸಂಬಂಧ, ಅಮೆರಿಕದಲ್ಲಿ ಈಗಾಗಲೇ ದಿವಾಳಿತನ ಸುರಕ್ಷತೆ ಅರ್ಜಿ ದಾಖಲಿಸಿದೆ. ‘ಸಾಲಗಾರರ ಉದ್ಯಮದ ಎಲ್ಲ ಉದ್ಯಮ ವ್ಯವಹಾರಗಳು ಅಥವಾ ಕೊಂಚ ಭಾಗವನ್ನು ಖರೀದಿಸುವ ಪೂರ್ವಭಾವಿ ಆಸಕ್ತಿ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಫೈರ್‌ಸ್ಟಾರ್‌ ಡೈಮಂಡ್‌ ಕೋರ್ಟ್‌ ಅಫಿಡವಿಟ್‌ ಒಂದರಲ್ಲಿ ತಿಳಿಸಿದೆ.

ಅಮೆರಿಕದ ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯಲ್ಲಿ ದಿವಾಳಿತನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಫೈರ್‌ಸ್ಟಾರ್‌ ಡೈಮಂಡ್‌ನ ಎರಡು ಅಂಗಸಂಸ್ಥೆಗಳು ಈ ಹಿಂದೆ, ನೀರವ್‌ರ ಭಾರತೀಯ ಕಂಪೆನಿ ಫೈರ್‌ಸ್ಟಾರ್‌ ಇಂಟರ್‌ನ್ಯಾಶನಲ್‌ ಲಿಮಿಟೆಡ್‌ನ ಮಾಲೀಕತ್ವ ಹೊಂದಿದ್ದವು.