ಬೆಂಗಳೂರಿನಲ್ಲಿ ಉದ್ಯಮಿಯೋರ್ವ ಅಳಿಯ ಹಾಗೂ ಪ್ರೇಯಸಿಯ ಜೊತೆ ಸೇರಿ ತನ್ನ 2ನೇ ಹೆಂಡತಿಯ ಹತ್ಯೆಗೆ ಸುಪಾರಿ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿಯೋರ್ವ ಅಳಿಯ ಹಾಗೂ ಪ್ರೇಯಸಿಯ ಜೊತೆ ಸೇರಿ ತನ್ನ 2ನೇ ಹೆಂಡತಿಯ ಹತ್ಯೆಗೆ ಸುಪಾರಿ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ತುಲೀಪ್ಸ್ ರೆಸಾರ್ಟ್ ಹಾಗೂ ಆಸ್ಟಿನ್ ಕಾಲೇಜು ಮಾಲಿಕ ಶ್ರೀಕುಮಾರ್ ಎಂಬಾತನಿಂದ ಕೃತ್ಯ ನಡೆದಿದೆ. ಈತನ ಪ್ರೇಯಸಿ ಉಷಾ ರೆಡ್ಡಿ ಹಾಗೂ ಅಳಿಯ ನವೀನ್ ಎಂಬಾತನ ಜೊತೆ ಸೇರಿ ತನ್ನ 2ನೇ ಪತ್ನಿ ಹಾಗೂ ಆಕೆಯ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನೆನ್ನಲಾಗಿದೆ.
ಇನ್ನು ಶ್ರೀಕುಮಾರ್ ಈ ಹಿಂದೆ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ ಜೈಲು ಸೇರಿದ್ದನೆನ್ನಲಾಗಿದೆ. ಸದ್ಯ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಉದ್ಯಮಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
