ಔರಂಗಾಬಾದ್`ನ ಲೇಸರ್ ಟೌನ್`ನ ನಿವಾಸಿ ಅಜಯ್ ಮುನೋಟ್ ಒಂದು ಬೆಡ್ ರೂಂನ 90 ಸುಸಜ್ಜಿತ ಮನೆಗಳನ್ನ ನಿರ್ಮಿಸಿ ಬಡವರಿಗೆ ನೀಡಿದ್ದಾನೆ.

ಮುಂಬೈ(ಡಿ.15): ಮಗಳ ಮದುವೆಯನ್ನ ನೂರಾರು ಕೋಟಿ ಖರ್ಚು ಮಾಡಿ ಧಾಂ ಧೂಂ ಎಂದು ಮಾಡುವ ಉದ್ಯಮಿಗಳನ್ನ ನೋಡಿದ್ದೇವೆ. ಆದರೆ, ಮಾಹಾರಾಷ್ಟ್ರದ ಔರಂಗಾಬಾದ್`ನ ಉದ್ಯಮಿ ತನ್ನ ಮಗಳ ಮದುವೆ ಸಂಭ್ರಮದಲ್ಲಿ 90 ಮನೆಗಳನ್ನ ಸೂರಿಲ್ಲದ ಬಡ ಜನರಿಗೆ ಉಡುಗೊರೆಯಾಗಿ ನೀಡಿದ್ದಾನೆ.

ಔರಂಗಾಬಾದ್`ನ ಲೇಸರ್ ಟೌನ್`ನ ನಿವಾಸಿ ಅಜಯ್ ಮುನೋಟ್ ಒಂದು ಬೆಡ್ ರೂಂನ 90 ಸುಸಜ್ಜಿತ ಮನೆಗಳನ್ನ ನಿರ್ಮಿಸಿ ಬಡವರಿಗೆ ನೀಡಿದ್ದಾನೆ.

ಜವಳಿ ಮತ್ತು ಗೋಧಿಯ ಸಗಟು ವ್ಯಾಪಾರಿಯಾಗಿರುವ ಮುನೋಟ್, 2 ಎಕರೆಯ ಜಾಗದಲ್ಲಿ ಈ ಕಾಲೋನಿಯನ್ನ ನಿರ್ಮಿಸಿದ್ದಾರೆ. ಬಡವರು, ನಿರ್ಗತಿಕರು, ಕೊಳಚೆಗೇರಿ ನಿವಾಸಿಗಳು ಮತ್ತು ದುಶ್ಚಟ ರಹಿತರಿಗೆ ಮಾತ್ರ ಈ ನಿವಾಸಗಳನ್ನ ವಿತರಿಸಲಾಗಿದೆ.

ವಧು ಶ್ರೇಯ ಮತ್ತು ವರರಿಬ್ಬರೂ ಈ ಕಾರ್ಯವನ್ನ ಶ್ಲಾಘಿಸಿದ್ದಾರೆ.