ವಾಷಿಂಗ್ಟನ್(ಸೆ.24): ಅಮೆರಿಕಾದ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದ್ದು, ವಾಷಿಂಗ್​ಟನ್​ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಂದ ಶೂಟೌಟ್​ ನಡೆದಿದೆ.

ಬರ್ಲಿಂಗ್​ಟನ್​ನ ಕ್ಯಾಸಕೆಡೆ​ಯ ಶಾಪಿಂಗ್ ಮಾಲ್​ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಫೈರಿಂಗ್ ಮಾಡಿದ್ದಾನೆ ಎನ್ನಲಾಗಿದ್ದು, ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಮಹಿಳೆಯರು ಎನ್ನಲಾಗಿದೆ. ಈ ದಾಳಿಯಿಂದ ಹಲವರು ಗಂಭೀರ ಗಾಯಗೊಂಡಿದ್ದಾರೆ. 

ನಿನ್ನೆ ರಾತ್ರಿ ಮಾಲ್​ಗೆ ಪ್ರವೇಶಿಸಿದ ಓರ್ವ ಬಂಧೂಕುಧಾರಿ ಮನಸೋ ಇಚ್ಛೆ ಗುಂಡಿನ ಮಳೆಗೆರೆದು ಪರಾರಿಯಾಗಿದ್ದು, ಆತನಿಗಾಗಿ ವಾಷಿಂಗ್​ಟನ್ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಕೃತ್ಯದಿಂದ ಮತ್ತೊಮ್ಮೆ ವಿಶ್ವದ ದೊಡ್ಡಣ್ಣ ಅಮೆರಿಕಾ ಬೆಚ್ಚಿ ಬಿದ್ದಿದೆ.