ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಗೆ ಇಂದಿಗೆ  ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಕಳೆದ ವರ್ಷ ಜು.8ರಂದು ಸೇನಾಪಡೆಗಳ ಕಾರ್ಯಾಚರಣೆಗೆ ಬುರ್ಹಾನ್ ವಾನಿ ಬಲಿಯಾಗಿದ್ದು, ಆ ದಿನದಿಂದ ದಿನವರೆಗೂ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ದತೆ ಮುಂದುವರೆದಿದೆ.

ಶ್ರೀನಗರ (ಜು. 08): ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಗೆ ಇಂದಿಗೆ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಹೇರಲಾಗಿದೆ.

ಕಳೆದ ವರ್ಷ ಜು.8ರಂದು ಸೇನಾಪಡೆಗಳ ಕಾರ್ಯಾಚರಣೆಗೆ ಬುರ್ಹಾನ್ ವಾನಿ ಬಲಿಯಾಗಿದ್ದು, ಆ ದಿನದಿಂದ ದಿನವರೆಗೂ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ದತೆ ಮುಂದುವರೆದಿದೆ.

ಬುರ್ಹಾನ್ ವಾನಿ ನೆನಪಿನಲ್ಲಿ ಪ್ರತ್ಯೇಕತಾವಾದಿ ನಾಯಕರು ಬೃಹತ್ ರ್ಯಾಲಿಗಳ ಆಯೋಜನೆಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ, ಕಣೆವೆಯಾದ್ಯಾಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ವಾನಿಯ ಹುಟ್ಟೂರು ಆಗಿರುವ ತ್ರಾಲ್’ನಲ್ಲಿ, ಶೋಪಿಯಾನ್ ಹಾಗೂ ಫುಲ್ವಾಮಾ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ.

ತ್ರಾಲ್’ಗೆ ತೆರಳಿ ವಾನಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಎಲ್ಲಾ ಪ್ರತ್ಯೇಕತಾವಾದಿ ಬಣಗಳ ನಾಯಕರಾದ ಸೈಯದ ಅಲೀ ಶಾ ಗೀಲಾನಿ, ಮಿರ್ವೈಜ್ ಉಮರ್ ಫಾರೂಖ್, ಹಾಗೂ ಜೆಕೆಎಲ್’ಎಫ್ ನಾಯಕ ಯಾಸಿನ್ ಮಲಿಕ್ ಜನರಿಗೆ ಕರೆಕೊಟ್ಟಿದ್ದಾರೆ.