ಉತ್ತಮ ರೈಲ್ವೆ ಸಿಬ್ಬಂದಿಗೆ ಬಹುಮಾನ, ಪ್ರೋತ್ಸಾಹಧನ, ಬೋನಸ್‌

Bumper Offer TO Railway Employees
Highlights

ಉದ್ಯೋಗಿಗಳ ನೈತಿಕ ಬಲ ಹೆಚ್ಚಿಸಲು ಮುಂದಾಗಿರುವ ರೈಲ್ವೆ ಇಲಾಖೆ, ಹೊಸ ಬೋನಸ್‌ ವ್ಯವಸ್ಥೆ, ಬಹುಮಾನ, ಪ್ರೋತ್ಸಾಹಧನ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ನವದೆಹಲಿ : ಉದ್ಯೋಗಿಗಳ ನೈತಿಕ ಬಲ ಹೆಚ್ಚಿಸಲು ಮುಂದಾಗಿರುವ ರೈಲ್ವೆ ಇಲಾಖೆ, ಹೊಸ ಬೋನಸ್‌ ವ್ಯವಸ್ಥೆ, ಬಹುಮಾನ, ಪ್ರೋತ್ಸಾಹಧನ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ಭಾರತದ ಅತಿ ದೊಡ್ಡ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾದ ಭಾರತೀಯ ರೈಲ್ವೆ 13 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಉತ್ತಮ ಕೆಲಸಗಾರರಿಗೆ ಪುರಸ್ಕಾರ ನೀಡುವ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಮುಂದಾಗಿರುವ ಇಲಾಖೆ, ಉತ್ತಮ ನೌಕರರಿಗೆ ಇನ್ನಷ್ಟುಪ್ರೋತ್ಸಾಹಧನ, ಬೋನಸ್‌ ಹಾಗೂ ಬಹುಮಾನ ನೀಡುವ ಇರಾದೆಯಲ್ಲಿದೆ.

ಈ ಸಂಬಂಧ ರಚನೆಯಾಗಿರುವ ರೈಲ್ವೆ ಸಮಿತಿಯೊಂದು ಈ ಕುರಿತು ಶಿಫಾರಸುಗಳನ್ನು ಮಾಡಿದ್ದು, ಮಾನದಂಡಗಳ ಬದಲಾವಣೆಗೆ ಸಲಹೆ ನೀಡಿದೆ. ವರದಿಯು ರೈಲ್ವೆ ಮಂಡಳಿಯ ಮುಂದೆ ಈಗ ಅಂಗೀಕಾರಕ್ಕಾಗಿ ಕಾಯುತ್ತಿದೆ.

ಶಿಫಾರಸುಗಳೇನು?: ಈವರೆಗೆ ಒಬ್ಬ ಉದ್ಯೋಗಿಯ ಸಾಧನೆಯನ್ನು ಆತನ 5 ವರ್ಷದ ವಾರ್ಷಿಕ ಕೆಲಸವನ್ನು ಆಧರಿಸಿ ಅಳೆಯಲಾಗುತ್ತಿತ್ತು. ಆದರೆ ಇನ್ನು ಮುಂದೆ ಆತನ ಸೇವಾವಧಿಯ ಇತ್ತೀಚಿನ 7 ವರ್ಷಗಳ ಪೈಕಿ 5 ವರ್ಷದ ಉತ್ತಮ ಸಾಧನೆಯನ್ನು ಮಾನದಂಡವನ್ನಾಗಿಸಿ ಅಳೆಯಬೇಕು.

ಸಿಬ್ಬಂದಿಗೆ ಉತ್ತಮ ಕ್ವಾರ್ಟರ್ಸ್‌ ವ್ಯವಸ್ಥೆ, ಉದ್ಯೋಗಿಗಳ ಸಂಗಾತಿಗಳಿಗೆ ಉಚಿತ ಪ್ರಯಾಣ ಹಾಗೂ ವೈದ್ಯಕೀಯ ಸೌಲಭ್ಯ ನೀಡಬೇಕು. ಶಿಕ್ಷಣ ಮುಂದುವರಿಸಲು ಬಯಸುವ ಉದ್ಯೋಗಿಗಳಿಗೆ ಹಣಕಾಸು ಸೌಲಭ್ಯ, ಕೆಳ ಹಂತದ ಸಿಬ್ಬಂದಿಯಲ್ಲದೆ ಎ ಮತ್ತು ಬಿ ಗ್ರೂಪ್‌ ಅಧಿಕಾರಿಗಳಿಗೂ ಬೋನಸ್‌ ನೀಡಬೇಕು.

ರೈಲು ಚಾಲಕರ ರೀತಿ ಗ್ಯಾಂಗ್‌ಮನ್‌ ಮತ್ತು ಟ್ರ್ಯಾಕ್‌ಮನ್‌ಗಳು 10 ವರ್ಷ ಅಪಘಾತರಹಿತ ಸೇವೆ ನೀಡಿದ್ದರೆ ಅವರಿಗೆ ಹಣಕಾಸು ಬಹುಮಾನ ಹಾಗೂ ಪ್ರಶಂಸಾ ಬ್ಯಾಡ್ಜ್‌ ಕೊಡಬೇಕು.

loader