ಮಂಗಳೂರು (ಮೇ. 05): ಚುನಾವಣಾ ಸಭೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ವಾಪಾಸು ತೆರಳುತ್ತಿರುವ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡುಗಳು ಪತ್ತೆಯಾದ ಘಟನೆ ನಡೆದಿದೆ.

ಭದ್ರತಾ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸುವ ವೇಳೆ, ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ 65 ವರ್ಷ ಪ್ರಾಯದ ವ್ಯಕ್ತಿಯ ಬ್ಯಾಗ್‌ನಲ್ಲಿ ಈ ಬುಲೆಟ್ಗಳು ಪತ್ತೆಯಾಗಿವೆ.  

ಪ್ರಧಾನಿ ಮೋದಿ ಹೊರಡುವ ವೇಳೆ  ಈ ಬುಲೆಟ್‌ಗಳು ಪತ್ತೆಯಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಿಚಾರಣೆ ವೇಳೆ ವ್ಯಕ್ತಿಯ ಬಳಿ ಪರವಾನಿಗೆ ಹೊಂದಿದ ಶಸ್ತ್ರ ಹೊಂದಿರುವ ವಿಚಾರ ಬಯಲಾಗಿದೆ. ಅದನ್ನು ಪೊಲೀಸ್ ಠಾಣೆಯಲ್ಲಿ ಸರಂಡರ್ ಮಾಡಿದ್ದಾಗಿ ತಿಳಿದು ಬಂದಿದೆ. 

ಬ್ಯಾಗ್‌ನಲ್ಲಿ ಬುಲೆಟ್‌ಗಳಿರೋ ವಿಚಾರ ಆ ವ್ಯಕ್ತಿ ಮರೆತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆನ್ನಲಾಗಿದೆ.