ತಮಿಳುನಾಡಿನ ಎನೈ ಅಂದಿರಾಳ್ ಸಿನಿಮಾ ಕನ್ನಡ ಭಾಷೆ ಯಲ್ಲಿ ಡಬ್ಬಿಂಗ್ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು
ಬೆಂಗಳೂರು(ಮಾ.06): ಮುಂದಿನ ದಿನದಲ್ಲಿ ಡಬ್ಬಂಗ್ ಅನ್ನೋ ಪದ ಯಾರ ಬಾಯಲ್ಲೂ ಬರಬಾರದು ಹಾಗೇನಾದರೂ ಬಂದರೆ ಅವರ ನಾಲಿಗೆ ಕಟ್ ಮಾಡ್ತೇವೆ ಎಂದು ನಟ ಬುಲೆಟ್ ಪ್ರಕಾಶ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಸತ್ಯದೇವ್ ಐಪಿಎಸ್ ಡಬ್ಬಿಂಗ್ ಸಿನಿಮಾ ವಿವಾದ ಕುರಿತಂತೆ ಕನ್ನಡಪರ ಸಂಘಟನೆ ಸ್ಯಾಂಡಲ್'ವುಡ್ ನಟ ನಟಿಯರು ಖಾಸಗಿ ಹೋಟೆಲ್'ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮಾತನಾಡಿ, ಡಬ್ಬಿಂಗ್ ಮಾಡ್ತಿರೋರು ಕನ್ನಡ ವಿರೋಧಿ ಗಳು, ಮೋಸಗಾರರು. ಕಾವೇರಿ ವಿರೋಧಿ ತಮಿಳುನಾಡಿನ ಎನೈ ಅಂದಿರಾಳ್ ಸಿನಿಮಾ ಕನ್ನಡ ಭಾಷೆ ಯಲ್ಲಿ ಡಬ್ಬಿಂಗ್ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರ ಕೂಡ ಡಬ್ಬಿಂಗ್ ವಿರುದ್ಧ ಮಸೂದೆ ಜಾರಿ ತರಬೇಕು ಎಂದು ಹೇಳಿದ ಅವರು ಪರಭಾಷಾ ಸಿನಿಮಾಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತಿರುವುದನ್ನು ಖಂಡಿಸಿ ಮಾರ್ಚ್ 9 ರಂದು ಬೃಹತ್ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನಟಿ ಸಂಜನಾ ಮಾತನಾಡಿ, ನಾನು ಬಹುಭಾಷಾ ನಟಿ.ಅದರೆ ಮೊದಲು ಸಿನಿಮಾ ಕನ್ನಡದಲ್ಲಿ ಮಾಡಿದ್ದೇನೆ. ಕನ್ನಡ ಭಾಷೆಗೆ ನನ್ನ ಬೆಂಬಲ. ಬೇರೆ ಬೇರೆ ಭಾಷೆ ಡಬ್ಬಿಂಗ್ ಮಾಡುವುದನ್ನು ವಿರೋಧಿಸುತ್ತೇನೆ ಎಂದರು.
ನಟಿ ತಾರಾ, ಕರವೇ ಮುಖಂಡ ಪ್ರವೀಣ್ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು.
