ನವದೆಹಲಿ[ಜೂ. 06]  ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ಪ್ರಪಂಚವೇ ಸಿದ್ಧವಾಗುತ್ತಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಇದೇ ಕಾರಣಕ್ಕೆ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಡಾಸನದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಆಸನ ಮಾಡುವುದರಿಂದ ಉಳಿದ ಆಸನಗಳನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಬರೆದಿದ್ದಾರೆ.

ಯೋಗವನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಅನೇಕ ವಿಚಾರಗಳಿಗೆ ಸ್ಫೂರ್ತಿ ಪಡೆದುಕೊಳ್ಳಬಹುದು ಎಂದು ಮೋದಿ ತಿಳಿಸಿದ್ದಾರೆ. 2014ರಲ್ಲಿ ಮೋದಿ ಯುಎಸ್ ಜನರಲ್ ಅಸೆಂಬ್ಲಿಯಲ್ಲಿ ಮಾತನಾಡುತ್ತ ಯೋಗ ದಿನದ ಉಲ್ಲೇಖ ಮಾಡಿದ್ದರು. ಅದಾದ ನಂತರ ಯೋಗ ದಿನವನ್ನು ಪ್ರಪಂಚವೇ ಮಾನ್ಯ ಮಾಡಿತು.