ಬಿಜೆಪಿ 2019ರ ಲೋಕಸಭೆ ಚುನಾವಣೆಯನ್ನು ಗೆಲ್ಲ ಬೇಕಾದರೆ ರಾಮ ಮಂದಿರ ನಿರ್ಮಾಣವನ್ನು ಆರಂಭಿಸಬೇಕು. ಇಲ್ಲವಾದರೆ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಲಿದೆ ಎಂದು ಆಚಾರ್ಯ ಹೇಳಿದ್ದಾರೆ.

ಅಯೋಧ್ಯೆ: ರಾಮನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ರಾಮನಿಗೆ ಮೋಸ ಮಾಡಿದೆ ಎಂದು ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಎಸ್‌. ದಾಸ್‌ ಆರೋಪಿಸಿದ್ದಾರೆ. 

ಎಎನ್‌ಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ದಾಸ್‌, ಒಂದು ವೇಳೆ ಬಿಜೆಪಿ 2019ರ ಲೋಕಸಭೆ ಚುನಾವಣೆಯನ್ನು ಗೆಲ್ಲ ಬೇಕಾದರೆ ರಾಮ ಮಂದಿರ ನಿರ್ಮಾಣವನ್ನು ಆರಂಭಿಸಬೇಕು. ಇಲ್ಲವಾದರೆ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಲಿದೆ ಎಂದು ಆಚಾರ್ಯ ಹೇಳಿದ್ದಾರೆ.

 ತಕ್ಷಣವೇ ರಾಮ ಮಂದಿರ ನಿರ್ಮಾಣವನ್ನು ಆರಂಭಿಸದೇ ಇದ್ದರೆ ಚಳವಳಿಯೊಂದನ್ನು ಆರಂಭಿಸಲಾಗುವುದು ಎಂದು ಚಾವಾನಿ ದೇವಾಲಯದ ಅರ್ಚಕ ಮಹಾಂತ ಪರಮಹಂಸ ದಾಸ್‌ ಬೆದರಿಕೆ ಹಾಕಿದೆ ಬೆನ್ನಲ್ಲೇ, ಈ ಹೇಳಿಕೆ ಹೊರಬಿದ್ದಿದೆ.