ಮೈತ್ರಿ ಸರ್ಕಾರದಲ್ಲಿ ಹೊಸ ಬಿರುಕು

Budget War In Karnataka Govt
Highlights

ಕರ್ನಾಟಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಇದೀಗ ಬಜೆಟ್ ಬಿರುಕು ಮೂಡುತ್ತಿದೆ.   ಹೊಸದಾಗಿ ಪ್ರತ್ಯೇಕ ಬಜೆಟ್ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ಬಜೆಟ್ ಮಂಡನೆ ತಪ್ಪಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಇದೀಗ ಬಜೆಟ್ ಬಿರುಕು ಮೂಡುತ್ತಿದೆ. ಹೊಸದಾಗಿ ಪ್ರತ್ಯೇಕ ಬಜೆಟ್ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ಬಜೆಟ್ ಮಂಡನೆ ತಪ್ಪಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ವಿರುದ್ಧ ಸಿದ್ಗದರಾಮಯ್ಯ ಗರಂ  ಆಗಿದ್ದಾರೆ.  ಇನ್ನು ಇದೇ ವಿಚಾರವಾಗಿ ಸಿದ್ದರಾಮಯ್ಯ ಜೊತೆ  ಕೆ.ಸಿ ವೇಣುಗೋಪಾಲ್ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.  

ಇದೇ 20 ರಂದು ರಾಜ್ಯಕ್ಕೆ ಆಗಮಿಸಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಜೆಟ್ ಕುರಿತು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದಾರೆ. 

ಬಜೆಟ್ ಮಂಡಿಸುವ ಬಗ್ಗೆ ನಿನ್ನೆ ರಾಹುಲ್ ಗಾಂಧಿ  ಜೊತೆ ಸಿಎಂ ಎಚ್ ಡಿಕೆ ಚರ್ಚೆ ನಡೆಸಿದ್ದರು. ಈ ನಿಟ್ಟಿನಲ್ಲಿ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಬಜೆಟ್ ಬೇಕೋ ಬೇಡವೋ ಎಂಬ ವರದಿ ನೀಡಬೇಕು ಎಂದು ವೇಣುಗೋಪಾಲ್ ಅವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. 

ಕುಮಾರಸ್ವಾಮಿ ಹೊಸ ಕಾರ್ಯಕ್ರಮಗಳನ್ನ ಘೋಷಿಸುವುದಾದರೆ ಪೂರಕ ಬಜೆಟ್ ನಲ್ಲಿ ಘೋಷಿಸಲಿ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಲಹೆ ನೀಡಿದ್ದಾರೆ.  ಪ್ರತ್ಯೇಕ ಬಜೆಟ್ ಮಂಡನೆ ಆದ್ರೆ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಹಣಕಾಸಿನ ಕಡಿತವಾಗಲಿದೆ. ಅಲ್ಲದೇ ಕಳೆದ ಬಜೆಟ್ ನಲ್ಲಿ ಘೋಷಣೆ ಆಗಿರುವ ಹೊಸ ಸ್ಕೀಮ್ ಗಳಿಗು ಅನುದಾನ ಸಿಗುವುದಿಲ್ಲವೆಂದು ಈ ರೀತಿ ಹೇಳಿದ್ದಾರೆ. 

loader