Asianet Suvarna News Asianet Suvarna News

ಆಟೋ ಚಾಲಕರಿಗೆ ಬಾಹುಬಲಿ ಕಟ್ಟಪ್ಪ ಶೈಲಿಯಲ್ಲಿ ಎಚ್ಚರಿಕೆ!

ಇಂತಹದೊಂದು ಚಿತ್ರವನ್ನು ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲ ‘ಫೇಸ್‌ಬುಕ್‌', ಮತ್ತು ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಚಿತ್ರದಲ್ಲಿ ಆಟೋದ ಹಿಂಬದಿ ಪ್ರಯಾಣಿಕನಾಗಿ ಕಟ್ಟಪ್ಪ ಕುಳಿತಿದ್ದು, ಬಾಹುಬಲಿ ಆಟೋ ಚಾಲಕನಾಗಿದ್ದಾನೆ.

BTP Warns Auto Drivers in Bahubali Kattapa Style
  • Facebook
  • Twitter
  • Whatsapp

ಬೆಂಗಳೂರು: ಆಟೋ ಚಾಲಕರೇ ಪ್ರಯಾಣಿಕರ ಬಳಿ ಹೆಚ್ಚು ಹಣ ಸುಲಿಗೆ ಮಾಡಿದ್ರೆ ಎಚ್ಚರ!.. ಪ್ರಯಾಣಿಕರ ಬಳಿ ಹೆಚ್ಚು ಹಣ ಕೇಳಿದರೆ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ- ಬಾಹುಬಲಿ ಮೇಲೆ ಸಿಟ್ಟಾದಂತೆ ಜನರೂ ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು ಎಂಬರ್ಥದಲ್ಲಿ ಮಾಹಿತಿ ನೀಡಿದ್ದಾರೆ.

ಹೌದು ಇಂತಹದೊಂದು ಚಿತ್ರವನ್ನು ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲ ‘ಫೇಸ್‌ಬುಕ್‌', ಮತ್ತು ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಚಿತ್ರದಲ್ಲಿ ಆಟೋದ ಹಿಂಬದಿ ಪ್ರಯಾಣಿಕನಾಗಿ ಕಟ್ಟಪ್ಪ ಕುಳಿತಿದ್ದು, ಬಾಹುಬಲಿ ಆಟೋ ಚಾಲಕನಾಗಿದ್ದಾನೆ.

ಬಾಹುಬಲಿ ಪ್ರಯಾಣಿಕ ಕಟ್ಟಪ್ಪನ ಬಳಿ ಪ್ರಯಾಣಿಸಿದ ದರಕ್ಕಿಂತ ಹೆಚ್ಚು ಹಣ ಕೇಳುತ್ತಾನೆ. ಇದರಿಂದ ಕಟ್ಟಪ್ಪ ಕೋಪಗೊಳ್ಳುತ್ತಾನೆ ಎಂಬರ್ಥದಲ್ಲಿ ವಿಡಂಬನಾತ್ಮಕವಾಗಿ, ಹಾಸ್ಯದಾಟಿಯಲ್ಲಿ ಹೇಳಲಾಗಿದೆ.

Follow Us:
Download App:
  • android
  • ios