ಬೆಂಗಳೂರು (ಫೆ.13): ನಾಳೆಯಿಂದ ಜಗತ್ಪ್ರಸಿದ್ಧ ಏರೋ ಇಂಡಿಯಾ ಶೋ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಏರೋ ಶೋ ವೀಕ್ಷಿಸಲು ಸುಮಾರು 5 ಲಕ್ಷ ಪಾಸ್/ ಟಿಕೆಟ್'ಗಳು ಈಗಾಗಲೇ ಬಿಕರಿಯಾಗಿವೆ.
ಬೆಂಗಳೂರು (ಫೆ.13): ನಾಳೆಯಿಂದ ಜಗತ್ಪ್ರಸಿದ್ಧ ಏರೋ ಇಂಡಿಯಾ ಶೋ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಏರೋ ಶೋ ವೀಕ್ಷಿಸಲು ಸುಮಾರು ೫ ಲಕ್ಷ ಪಾಸ್/ ಟಿಕೆಟ್'ಗಳು ಈಗಾಗಲೇ ಬಿಕರಿಯಾಗಿವೆ.
೫ ಲಕ್ಷ ಮಂದಿ ೫ ಲಕ್ಷ ವಾಹನಗಳಲ್ಲಿ ಬಂದರೆ ಸಾಕಷ್ಟು ಪೂರ್ವಸಿದ್ಧತೆಯಿದ್ದಾಗ್ಯೂ ಸಂಚಾರ ದಟ್ಟಣೆ ಹೆಚ್ಚಾಗಿ ಸಮಸ್ಯೆವುಂಟಗುತ್ತದೆ ಎಂದು ಅವರು ಹೇಳಿದ್ದಾರೆ. ಏರೋ ಶೋಗೆ ಬರುವವರು ಬಿಎಂಟಿಸಿ ಬಸ್ಸುಗಳನ್ನು ಬಳಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಅರ್. ಹಿತೇಂದ್ರ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಸಂಚಾರ ಮಾರ್ಗ ಬದಲಾವಣೆಗಳನ್ನು ಮುಂಚಿತವಾಗಿ ಗಮನಿಸಿ ನಿಗದಿಪಡಿಸಿದ ಪ್ರವೇಶದ್ವಾರಗಳಿಗೆ ತಲುಪುವಂತೆ ಆರ್. ಹಿತೇಂದ್ರ ಅವರು ಮನವಿ ಮಾಡಿದ್ದಾರೆ. ಸಾರ್ವಜನಿಕರು ಸಹಕರಿಸಿದರೆ ಸಂಚಾರದಟ್ಟಣೆ ಸಮಸ್ಯೆಗಳನ್ನು ತಡೆಯಬಹುದು ಎಂದಿದ್ದಾರೆ.
