ಬಿಎಸ್ ಯಡಿಯೂರಪ್ಪನವರು ಇನ್ನೆರಡು ದಿನ ನಿರಾಳರಾಗಿರಬಹುದು. ಶಿವರಾಮ ಕಾರಂತ ಬಡಾವಣೆ ಡೀನೋಟಿಫಿಕೇಶನ್ ಪ್ರಕರಣದಲ್ಲಿ ಎಫ್'ಐಆರ್ ರದ್ದು ಕೋರಿ ಬಿಎಸ್'ವೈ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ಆಗಸ್ಟ್ 30ಕ್ಕೆ ಮುಂದೂಡಿದೆ. ಇನ್ನೆರಡು ದಿನ ಬಿಎಸ್'ವೈ ಅವರನ್ನು ಬಂಧಿಸದಂತೆ ಸೂಚಿಸಲಾಗಿದೆ.

ಬೆಂಗಳೂರು(ಆ. 28): ಬಿಎಸ್ ಯಡಿಯೂರಪ್ಪನವರು ಇನ್ನೆರಡು ದಿನ ನಿರಾಳರಾಗಿರಬಹುದು. ಶಿವರಾಮ ಕಾರಂತ ಬಡಾವಣೆ ಡೀನೋಟಿಫಿಕೇಶನ್ ಪ್ರಕರಣದಲ್ಲಿ ಎಫ್'ಐಆರ್ ರದ್ದು ಕೋರಿ ಬಿಎಸ್'ವೈ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ಆಗಸ್ಟ್ 30ಕ್ಕೆ ಮುಂದೂಡಿದೆ. ಇನ್ನೆರಡು ದಿನ ಬಿಎಸ್'ವೈ ಅವರನ್ನು ಬಂಧಿಸದಂತೆ ಸೂಚಿಸಲಾಗಿದೆ.

ಇಂದಿನ ವಿಚಾರಣೆಯಲ್ಲಿ ಯಡಿಯೂರಪ್ಪ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು; ಭ್ರಷ್ಟಾಚಾರ ನಿಗ್ರಹ ದಳದ ಪರ ರವಿವರ್ಮಕುಮಾರ್ ವಾದ ಮಂಡಿಸಿದರು. ನ್ಯಾ| ಅರವಿಂದ್ ಕುಮಾರ್ ಅವರ ಏಕಸದಸ್ಯ ಹೈಕೋರ್ಟ್ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.