ಶಿಡ್ಲಘಟ್ಟ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನನ್ನನ್ನು ಬಿಜೆಪಿಗೆ ಸೆಳೆ ಯಲು ಪ್ರಯತ್ನಿಸಿದ್ದು ಸತ್ಯವೆಂದು ಶಿಡ್ಲ ಘಟ್ಟ ಶಾಸಕ ವಿ. ಮುನಿಯಪ್ಪ ಸ್ಪಷ್ಟಪಡಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಮಗ ಶಶಿಧರ್ ಹಾಗೂ
ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಸಹಪಾಠಿಗಳು. 

ಇದೇ ಸಲುಗೆ ಮೇಲೆ ವಿಜಯೇಂದ್ರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಂತೆ ನನ್ನ ಮನವೊಲಿಸಲು ಯತ್ನಿಸಿದರು ಎಂದರು. ಈ ಬಗ್ಗೆ ನನ್ನ ಮಗನ ಜತೆ ಚರ್ಚೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದ್ದೂ, 5
ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ದ್ರೋಹ ಬಗೆಯಲಾರೆ ಎಂದರು.