ಕಾಂಗ್ರೆಸ್ ಬಗ್ಗೆ ಮೃದುಧೋರಣೆ ತೋರಿದ ಬಿಎಸ್’ವೈ

BSY Soft corner about Congress
Highlights

ಹೊಂದಾಣಿಕೆ ರಾಜಕೀಯದ ಮೂಲಕ  ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಅಪ್ಪ ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ. ಹೆಸರು ಹೇಳದೆ ದೇವೆಗೌಡರು ಮತ್ತು ಕುಮಾರಸ್ವಾಮಿರನ್ನ ಬಿಎಸ್‌ವೈ ಟೀಕಿಸಿದ್ದಾರೆ.  ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿ ಕಾಂಗ್ರೆಸ್ ಪರ ಮೃದುಧೋರಣೆ ತೋರಿದ್ದಾರೆ.

ಬೆಂಗಳೂರು (ಜೂ. 06): ಕಾಂಗ್ರೆಸ್ ಮುಗಿಸಲು ಅಪ್ಪಮಕ್ಕಳ ಸಂಚು ಮಾಡಿದ್ದಾರೆ ಎನ್ನುವ ಮೂಲಕ ಬಿಎಸ್ ವೈ ಕಾಂಗ್ರೆಸ್ ಬಗ್ಗೆ ಮತ್ತೆ ಮೃದು ಧೋರಣೆ ತೋರಿದ್ದಾರೆ. 

ಹೊಂದಾಣಿಕೆ ರಾಜಕೀಯದ ಮೂಲಕ  ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಅಪ್ಪ ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ. ಹೆಸರು ಹೇಳದೆ ದೇವೆಗೌಡರು ಮತ್ತು ಕುಮಾರಸ್ವಾಮಿರನ್ನ ಬಿಎಸ್‌ವೈ ಟೀಕಿಸಿದ್ದಾರೆ.  ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿ ಕಾಂಗ್ರೆಸ್ ಪರ ಮೃದುಧೋರಣೆ ತೋರಿದ್ದಾರೆ.

ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನು ಕಾದು ನೋಡೋಣ. ಒಂದು, ಎರಡು , ಮೂರು ತಿಂಗಳು ಕಾದು ನೋಡೋಣ. ಜಯನಗರ ಕ್ಷೇತ್ರ ಹಾಗೂ ವಿಧಾನಪರಿಷತ್‌ನಲ್ಲೂ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಅವರೇನಾದ್ರು ಮಾಡಲಿ ನಮ್ಮ ಪ್ರಯತ್ನ ಮಾತ್ರ ನಿಲ್ಲುವುದಿಲ್ಲ.  ಇಂದು ಹಲವು ಕಡೆ ವಿಧಾನಪರಿಷತ್ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ಹವಾಮಾನ ವೈಪರಿತ್ಯದಿಂದಾಗಿ ಹೆಲಿಕ್ಯಾಪ್ಟರ್ ಪ್ರಯಾಣ ರದ್ದು ಮಾಡಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು  ಮೈಸೂರಿನಲ್ಲಿ ಮಾಜಿ ಸಿಎಂ ಬಿಎಸ್‌ವೈ ಹೇಳಿದ್ದಾರೆ. 
 
loader