Asianet Suvarna News Asianet Suvarna News

ರಾಜ್ಯದ ನಾಲ್ವರು ಸಚಿವರಿಗೆ ಸಂಪುಟದಿಂದ ಗೇಟ್'ಪಾಸ್: ಯಡಿಯೂರಪ್ಪ ಭವಿಷ್ಯ

ಎಲ್ಲಾ ಗೊತ್ತಿದ್ದೂ ಆಪ್ತರನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಯಡಿ​ಯೂ​ರಪ್ಪ ಕಿಡಿ​ಕಾ​ರಿ​ದ​ರು.

bsy predicts four ministers may be ousted from cabinet

ಶಿವಮೊಗ್ಗ​: ಇನ್ನು ಹದಿ​ನೈದು ದಿನ​ದಲ್ಲಿ ರಾಜ್ಯ​ದಲ್ಲಿ ನಾಲ್ಕು ಸಚಿ​ವರು ಸಂಪು​ಟ​ದಿಂದ ಹೊರ​ನ​ಡೆ​ಯುವ ಪರಿ​ಸ್ಥಿತಿ ನಿರ್ಮಾ​ಣ​ವಾ​ಗು​ತ್ತ​ದೆ. ಇದರ ಬೆನ್ನಲ್ಲೇ ಮುಖ್ಯ​ಮಂತ್ರಿ​ಗಳೂ ತಮ್ಮ ಸ್ಥಾನಕ್ಕೆ ರಾಜಿ​ನಾಮೆ ನೀಡುವ ಕಾಲವೂ ಬರ​ಲಿದೆ ಎಂದು ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎಸ್‌. ಯಡಿ​ಯೂ​ರಪ್ಪ ಹೊಸ ಬಾಂಬ್‌ ಹಾಕಿ​ದ್ದಾ​ರೆ.

ಸೋಮ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ, ಸಂಪು​ಟ​ದಿಂದ ಹೊರ ನಡೆ​ಯುವ ಸಚಿ​ವರು ಮುಖ್ಯ​ಮಂತ್ರಿ ವಿರುದ್ಧ ಮಾತ​ನಾ​ಡಿ​ದರೂ, ತಮಗೆ ಬಂದ ಹಣ​ದ​ಲ್ಲಿ ಸಿದ್ದ​ರಾ​ಮಯ್ಯ ಅವ​ರಿಗೂ ಪಾಲು ಕೊಟ್ಟಿದ್ದೇವೆ ಎಂದು ಹೇಳಿದರೂ ಅಚ್ಚರಿ ಇಲ್ಲ ಎಂದು ಹೇಳಿದರು.

ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗ​ಲಿದ್ದಾರೆ ಎಂದು ಸಿದ್ದ​ರಾ​ಮಯ್ಯ ಹೇಳಿ​ದ್ದಾರೆ. ಆ ರೀತಿ ಮಾತ​ನಾ​ಡುವ ಮೊದಲು ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮುಖ್ಯ​ಮಂತ್ರಿಗಳ ಎಡ-ಬಲ ಇರುವ ಸಚಿವರುಗಳೇ ಕಮಿಷನ್‌ ವ್ಯವಹಾರದಲ್ಲಿ ಪಾಲುದಾ​ರರಾ​ಗಿದ್ದು, ಇನ್ನೆರೆಡು ಮೂರು ತಿಂಗಳಲ್ಲಿ ಎಲ್ಲವೂ ಬಯಲಾಗಲಿದೆ. ತಮ್ಮ ಆಪ್ತ ಸಚಿವರ ಹಗರಣದಿಂದಾಗಿಯೇ ಮುಖ್ಯ​ಮಂತ್ರಿ​ಯವರು ಖುರ್ಚಿ ಬಿಡುವ ಕಾಲ ಸನ್ನಿ​ಹಿ​ತ​ವಾ​ಗಿದೆ ಎಂದರು.

ಶೇ.40 ಕಿಕ್‌'​ಬ್ಯಾ​ಕ್‌: ಎತ್ತಿನಹೊಳೆ ಯೋಜನೆಗೆ ಅನುಮತಿ ಸಿಗುವ ಮೊದಲೇ ರೂ.14 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಾಮ ಗಾರಿ ಆರಂಭಕ್ಕೆ ಮುನ್ನವೇ ಕೋಟ್ಯಂತರ ಮೌಲ್ಯದ ಪೈಪ್‌ ಖರೀದಿಸ ಲಾಗಿದೆ. ಇದರಲ್ಲಿ ಸಿಎಂ ಹಾಗೂ ಅವ​ರ ಆಪ್ತ ಸಚಿವರು ಶೇ.30ರಿಂದ 40ರಷ್ಟುಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದೂ ಬಿಎ​ಸ್‌ವೈ ಆರೋ​ಪಿ​ಸಿ​ದ್ದಾ​ರೆ. ಬೆಂಗಳೂರಿನ ಸ್ಟೀಲ್‌ ಬ್ರಿಡ್ಜ್‌ ಗುತ್ತಿಗೆದಾರ ಸಚಿ​ವ​ರೊ​ಬ್ಬ​ರಿಗೆ ರೂ.500 ಕೋಟಿ ನೀಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಕ್ರಮ ನೋಟು ಪ್ರಕರಣದಲ್ಲಿ ಸಿಕಿಬಿದ್ದಿರುವ ಗುತ್ತಿಗೆದಾರ ಜಯಚಂದ್ರ ಸಹ ಹಣ ಸಚಿವರದ್ದು ಎಂದಿದ್ದಾನೆ. ಈ ಎಲ್ಲ ಪ್ರಕರಣಗಳಲ್ಲೂ ಮುಖ್ಯಮಂತ್ರಿಗಳ ಆಪ್ತ ಸಚಿವರೇ ಇದ್ದಾರೆ. ಎಲ್ಲಾ ಗೊತ್ತಿದ್ದೂ ಆಪ್ತರನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಯಡಿ​ಯೂ​ರಪ್ಪ ಕಿಡಿ​ಕಾ​ರಿ​ದ​ರು.

ಸಚಿ​ವ​ರೊ​ಬ್ಬರ ಸೆರೆಗೆ ಸಿದ್ಧ​ತೆ?
ಬೆಂಗಳೂರು ರೂ.2000 ಮುಖಬೆಲೆಯ ರೂ.5.7ಕೋಟಿ ನೋಟುಗಳು ಪತ್ತೆಯಾದ ಪ್ರಕರಣದಲ್ಲಿ ರಾಜ್ಯದ ಹಿರಿಯ ಸಚಿವರೊಬ್ಬರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ಟೈಮ್ಸ್‌ ವರದಿ ಮಾಡಿದೆ. ಸಚಿವರ ಬಂಧನ ನಿರ್ಧಾರವನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದ್ದು ಹಸಿರು ನಿಶಾನೆಗಾಗಿ ಕಾಯುತ್ತಿದೆ ಎನ್ನ​ಲಾ​ಗಿ​ದೆ.

ಯಡಿಯೂರಪ್ಪ ಗಡುವು ಕಾದುನೋಡುತ್ತೇವೆ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇನ್ನೂ ನಾಲ್ವರು ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿ ಯಿಸಿರುವ ಕೆಪಿ ಸಿಸಿ ಅಧ್ಯಕ್ಷ ಡಾ. ಜಿ. ಪರಮೇ ಶ್ವರ, ಯಡಿಯೂರಪ್ಪ ಅವರೇ 15 ದಿನ ಗಡವು ನೀಡಿದ್ದಾರೆ. ನಾವು ಕಾದು ನೋಡುತ್ತೇವೆ ಎಂ ದರು. ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಯಡಿಯೂರಪ್ಪ ಹೇಳಿಕೆ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯಿಸುವುದಿಲ್ಲ. ಕಾದು ನೋಡು ತ್ತೇವೆ ಎಂದರು. ಸಚಿವ ಎಚ್‌.ವೈ.ಮೇಟಿ ಅವರ ವಿರುದ್ಧ ಆರೋಪಿಸಿ ರುವ ಆರ್‌'ಟಿಐ ಕಾರ್ಯಕರ್ತ ಬಸವರಾಜ ಅವರು ನನ್ನನ್ನು ಭೇಟಿಯಾಗುವ ವಿಚಾರ ನನಗೆ ಗೊತ್ತಿಲ್ಲ. ಈವರೆಗೆ ಅವರು ನನ್ನನ್ನಾಗಲಿ, ನನ್ನ ಕಚೇರಿಯನ್ನಾಗಲಿ ಸಂಪರ್ಕಿಸಿಲ್ಲ. ಈಗಾಗಲೇ ಮೇಟಿ ಅವರೇ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ ಎಂದರು.

(ಕನ್ನಡಪ್ರಭ ವಾರ್ತೆ)
epaper.kannadaprabha.in

Follow Us:
Download App:
  • android
  • ios