ಈಶ್ವರಪ್ಪ ಬಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್ ನೀಡಿದ್ದಾರೆ. ಆರ್ಎಸ್ಎಸ್ ಮುಖಂಡ ಸಂತೋಷ್ ಆಪ್ತನಾಗಿದ್ದ ಮಲ್ಲಿಕಾರ್ಜುನ್ ಎಂಬಾತನ್ನ ಯಡಿಯೂರಪ್ಪ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು(ಎ.28): ಈಶ್ವರಪ್ಪ ಬಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್ ನೀಡಿದ್ದಾರೆ. ಆರ್ಎಸ್ಎಸ್ ಮುಖಂಡ ಸಂತೋಷ್ ಆಪ್ತನಾಗಿದ್ದ ಮಲ್ಲಿಕಾರ್ಜುನ್ ಎಂಬಾತನ್ನ ಯಡಿಯೂರಪ್ಪ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಲ್ಲಿಕಾರ್ಜುನ್ ಕಳೆದ 10 ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅತೃಪ್ತರ ಸಮಾವೇಶದ ವೇಳೆಯಲ್ಲಿ ಮಲ್ಲಿಕಾರ್ಜುನ್ ಸಹಕಾರ ನೀಡಿದ್ದನು ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ್ ಸಮಾವೇಶ ಕರ ಪತ್ರ ತಯಾರಿಕೆ, ಕೆಲ ನಾಯಕರಿಗೆ ಮೇಲ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಈಗ ಮಲ್ಲಿಕಾರ್ಜುನ್ನನ್ನು ಬಿಜೆಪಿ ಕಚೇರಿ ಕೆಲಸದಿಂದ ವಜಾಗೊಳಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
