‘80 ರಲ್ಲಿ 40 ನಮಗೆ ಬೇಕು’:ಮಾಯಾ ಬೇಡಿಕೆ?

news | Saturday, June 2nd, 2018
Suvarna Web Desk
Highlights

ಇತ್ತಿಚೀಗಷ್ಟೇ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ವಿರೋಧಿ ಬಣ ಭರ್ಜರಿ ಜಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೋದಿ ವಿರುದ್ದ ತೊಡೆ ತಟ್ಟಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ, ಅದರಲ್ಲಿ ಜಯ ಸಾಧಿಸಿದೆ.

ಲಕ್ನೋ(ಜೂ.2): ಇತ್ತಿಚೀಗಷ್ಟೇ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ವಿರೋಧಿ ಬಣ ಭರ್ಜರಿ ಜಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೋದಿ ವಿರುದ್ದ ತೊಡೆ ತಟ್ಟಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ, ಅದರಲ್ಲಿ ಜಯ ಸಾಧಿಸಿದೆ.

೨೦೧೯ ರ ಲೋಕಸಭೆ ಚುನಾವಣೆಯಲ್ಲೂ ಈ ಬಣ ಒಟ್ಟಿಗೆ ಚುನಾವಣೆ ಎದುರಿಸುವ ಕುರಿತು ಚರ್ಚೆ ಆರಂಭವಾಗಿದೆ. ಅದರಂತೆ ಉತ್ತರಪ್ರದೇಶದಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳು ಒಟ್ಟಾಗಿ ಮೋದಿ ಅವರನ್ನು ಎದುರಿಸಲಿವೆ. ಕೈರಾನಾ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿದ ಬಳಿಕ ಈ ಪಕ್ಷಗಳ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ.

ಆದರೆ ೨೦೧೯ ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಷಯ ಈ ಪಕ್ಷಗಳಿಗೆ ಕಗ್ಗಂಟಾಗುವ ಸಂಭವವಿದೆ. ಕೈರಾನಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಬಿಎಸ್ ಪಿ ಇದೀಗ ಹುಮ್ಮಸ್ಸಿನಲ್ಲಿದ್ದು, 80 ಲೋಕಸಭಾ ಕ್ಷೇತ್ರಗಳ ಪೈಕಿ 40 ರಲ್ಲಿ ಸ್ಪರ್ಧಿಸಲು ಮುಂದಾಗಿದೆ.

ಒಂದು ವೇಳೆ ಮೈತ್ರಿ ಸಾಧ್ಯವಾದರೆ ಕನಿಷ್ಠ ೪೦ ಸೀಟುಗಳನ್ನು ತನಗೆ ಬಿಟ್ಟು ಕೊಡಬೇಕೆಂದು ಬಿಎಸ್ ಪಿ ಅಧಿನಾಯಕಿ ಮಾಯಾವತಿ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಎಸ್ ಪಿ ಬಲವಗುತ್ತಿದ್ದು, ಮೈತ್ರಿ ಬೇಕೆಂದರೆ 40 ಸೀಟುಗಳನ್ನು ಬಿಟ್ಟು ಕೊಡಬೇಕೆಂದು ಮಾಯಾವತಿ ಆಗ್ರಹಿಸಿದ್ದಾರೆ. ಮಾಯಾವತಿ ಅವರ ಈ ಬೇಡಿಕೆ ಈಗಾಗಲೇ ಎಸ್ ಪಿ ಮತ್ತು ಕಾಂಗ್ರೆಸ್ ಗೆ ತಲೆ ನೋವು ತಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಅಜೆಂಡಾದೊಂದಿಗೆ ಮೈತ್ರಿಗೆ ಮುಂದಾಗಿರುವ ಈ ಪಕ್ಷಗಳು, ಸೀಟು ಹಂಚಿಕೆ ವಿಚಾರದಲ್ಲಿ ಕಚ್ಚಾಡಿಕೊಂಡರೆ ಆಶ್ಚಯರ್ಯವಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. 

Comments 0
Add Comment

  Related Posts

  CM Meeting Empty seats at Magadi

  video | Wednesday, April 4th, 2018

  CM Meeting Empty seats at Magadi

  video | Wednesday, April 4th, 2018

  Centre Mulling To Hold Loksabha Election This Year

  video | Tuesday, January 30th, 2018

  Mahadayi Issue Raised in Loksabha

  video | Tuesday, January 2nd, 2018

  CM Meeting Empty seats at Magadi

  video | Wednesday, April 4th, 2018
  nikhil vk