ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೊದಲ 100 ಅಭ್ಯರ್ಥಿಗಳ ಪಟ್ಟಿಯನ್ನು ಬಹುಜನ ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದೆ.

ಲಕ್ನೋ (ಜ.05): ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೊದಲ 100 ಅಭ್ಯರ್ಥಿಗಳ ಪಟ್ಟಿಯನ್ನು ಬಹುಜನ ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದೆ.

ನಮ್ಮ ಪಕ್ಷ ಯಾರ ಜೊತೆಯೂ ಮೈತ್ರಿಗೆ ಸೇರುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ತಮ್ಮ ಪಕ್ಷವು ಮುಸ್ಲೀಂರಿಗೆ 97 ಟಿಕೆಟ್, ಮೇಲ್ವರ್ಗದವರಿಗೆ 113, ಹಿಂದುಳಿದ ಅಭ್ಯರ್ಥಿಗಳಿಗೆ 106 ಹಾಗೂ ದಲಿತರಿಗೆ 87 ಟಿಕೆಟ್ ನೀಡುವುದಾಗಿ ಮಾಯಾವತಿ ಘೋಷಿಸಿದ್ದರು. ಇಂದು ಮೊದಲ ಹಂತದ 100 ಅಭ್ಯರ್ಥಿಗಳಲ್ಲಿ 36 ಟಿಕೆಟ್ ಗಳನ್ನು ಮುಸ್ಲೀಂರಿಗೆ ನೀಡಲಾಗಿದೆ.

ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆ. 11 ರಂದು ಪ್ರಾರಂಭವಾಗಿ ಮಾರ್ಚ್ 8 ರಂದು ಕೊನೆಗೊಳ್ಳಲಿದೆ. ಮಾರ್ಷ್ 11 ಮತ ಎಣಿಕೆ ನಡೆಯಲಿದೆ ಎಂದು ನಿನ್ನೆ ಚುನಾವಣಾ ಆಯೋಗ ಹೇಳಿದೆ.