ಲಖನೌ: ಮುಂದಿನ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿ ಹುದ್ದೆ ಏರುವ ಕನಸಿನಲ್ಲಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿಗೆ ಅವರದ್ದೇ ಪಕ್ಷದ ಉಪಾಧ್ಯಕ್ಷ ಜೈಪ್ರಕಾಶ್ ಶಾಕ್ ನೀಡಿದ್ದಾರೆ. 

ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ, ರಾಹುಲ್ ಎಂದಿಗೂ ಭಾರತದ ಪ್ರಧಾನಿ ಆಗಲಾರರು ಎಂದು ಹೇಳಿದ್ದಾರೆ. 

ರಾಹುಲ್, ತಂದೆ ರಾಜೀವ್‌ರಂತೆ ಇದ್ದಿದ್ದರೆ ಅದರ ಮಾತೇ ಬೇರೆ ಇರುತ್ತಿತ್ತು. ಆದರೆ ಅವರು ತಮ್ಮ ವಿದೇಶಿ ಮೂಲದ ತಾಯಿ ರೀತಿ ಹೆಜ್ಜೆಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಪ್ರಕಾಶ್‌ರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ.