ಜೆಡಿಎಸ್-ಬಿಎಸ್’ಪಿ ದೋಸ್ತಿ: ದಳಕ್ಕೆ ಎಷ್ಟು ಲಾಭ, ರಾಜ್ಯದಲ್ಲಿ ಬಿಎಸ್’ಪಿ ಸಾಧನೆಯೇನು, ಸಂಕ್ಷಿಪ್ತ ವರದಿ

BSP Achievements at Karnataka State
Highlights

1999ರಲ್ಲಿ 85 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಬಿಎಸ್ಪಿ 2,08,820 ಮತ ಗಳಿಸಿತ್ತು. ಶೇ.2.60 ಮತ.

ಬೆಂಗಳೂರು(ಫೆ.08): ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಜೆಡಿಎಸ್, ಮೊದಲ ಹಂತದಲ್ಲಿಯೇ ಬಿಎಸ್’ಪಿಯೊಂದಿಗೆ ಕೆಲ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಸಣ್ಣ ಮುನ್ನಡೆ ಕಂಡಿದೆ.

ರಾಜ್ಯದಲ್ಲಿ ಬಿಎಸ್’ಪಿ ಸಾಧನೆ
1)1994ರಲ್ಲಿ ಬೀದರ್ ಕ್ಷೇತ್ರದಿಂದ ಬಿಎಸ್ಪಿಯ ಸೈಯ್ಯದ್ ಜುಲ್ಫಿಕರ್ ಗೆಲುವು,  77 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 1,60,607 ಮತಗಳು ಬಂದಿತ್ತು.ರಾಜ್ಯದ ಒಟ್ಟು ಮತಗಳ ಪೈಕಿ ಶೇ. 2.23 ರಷ್ಟು ಮತಗಳಿಕೆ ಬಿಎಸ್ಪಿಯದ್ದಾಗಿತ್ತು
2) 1999ರಲ್ಲಿ 85 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಬಿಎಸ್ಪಿ 2,08,820 ಮತ ಗಳಿಸಿತ್ತು. ಶೇ.2.60 ಮತ.
3) 2004ರಲ್ಲಿ 102 ಕ್ಷೇತ್ರಗಳಲ್ಲಿ 4,37,564 ಮತಗಳನ್ನು ಗಳಿಸಿತ್ತು. ರಾಜ್ಯದಲ್ಲಿ ಒಟ್ಟಾರೆ ಮತ ಪ್ರಮಾಣ ಶೇ. 3.80 ರಷ್ಟಿತ್ತು. ಕೊಳ್ಳೇಗಾಲದಲ್ಲಿ ಅಣ್ಣಾ ಮಹೇಶ್ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದರು. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿನ ವ್ಯತ್ಯಾಸಕ್ಕೂ ಹೆಚ್ಚಿನ ಮತಗಳನ್ನು ಬಿಎಸ್ಪಿ ಪಡೆದಿತ್ತು. ಕಾಂಗ್ರೆಸ್’ನ ಹೀನಾಯ ಸೋಲಿಗೆ ಬಿಎಸ್ಪಿ ಕಾರಣ ಎಂಬ ವಿಶ್ಲೇಷಣೆ ಬಂದಿತ್ತು.
4) 2008ರಲ್ಲಿ 90 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಬಿಎಸ್ಪಿ 6,56,210 ಮತ ಪಡೆಯುವ ಮೂಲಕ ಶೇಕಡಾವಾರು  6.12 ರಷ್ಟು ಮತಗಳನ್ನು ಪಡೆದಿತ್ತು.
5) 2013ರಲ್ಲಿ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಿ  2,84,768 ಮತಗಳಿಸಿತ್ತು. ಶೇಕಡವಾರು ಮತ. 1.16 .

loader