ಬಿಎಸ್ಸೆನ್ನೆಲ್ ಸಂಸ್ಥೆ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ 40 ಸಾವಿರ ವೈಫೈ ಹಾಟ್'ಸ್ಪಾಟ್'ಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ.
ಚೆನ್ನೈ(ಜ. 01): ರಿಲಾಯನ್ಸ್ ಜಿಯೋ ಆರಂಭಿಸಿದ ಬೆಲೆ ಸಮರ ಈಗ ತಾರಕಕ್ಕೇರುತ್ತಿದ್ದು ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಭರ್ಜರಿ ಪ್ಲಾನ್ ಬಿಟ್ಟಿದೆ. 144 ರೂಪಾಯಿಗೆ ಅನ್'ಲಿಮಿಟೆಡ್ ಲೋಕಲ್ ಮತ್ತು ಎಸ್'ಟಿಡಿ ಕಾಲ್'ಗಳನ್ನು ಉಚಿತ. ಜೊತೆಗೆ, 300 ಎಂಬಿ ಡೇಟಾ ಕೂಡ ಉಚಿತ. ಒಂದು ತಿಂಗಳವರೆಗೆ ಈ ಅನ್'ಲಿಮಿಟೆಡ್ ಕರೆಗಳ ಆಫರ್ ಇರುತ್ತದೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಆಫರ್ ಘೋಷಣೆ ಮಾಡಿದ ಬಿಎಸ್ಸೆನ್ನೆಲ್'ನ ಛೇರ್ಮನ್ ಅನುಪಮ್ ಶ್ರೀವಾಸ್ತವ ಅವರು, ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಗ್ರಾಹಕರಿಬ್ಬರಿಗೂ ಈ ಆಫರ್ ಇದೆ ಎಂದು ತಿಳಿಸಿದರು.
ಇದೇ ವೇಳೆ, 4,400 ವೈಫೈ ಹಾಟ್'ಸ್ಪಾಟ್'ಗಳನ್ನು ಸ್ಥಾಪಿಸಿರುವ ಬಿಎಸ್ಸೆನ್ನೆಲ್ ಸಂಸ್ಥೆ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ 40 ಸಾವಿರ ವೈಫೈ ಹಾಟ್'ಸ್ಪಾಟ್'ಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ.
