20ಕ್ಕೂ ಹೆಚ್ಚು ಸೇನಾ ಶಿಬಿರಗಳ ಮೇಲೆ ಪಾಕಿಸ್ತಾನ ರೇಂಜರ್’ಗಳು ಗುಂಡಿನ ದಾಳಿ ನಡೆಸಿದೆ. ಆರ್.ಎಸ್.ಪುರ, ಅಖ್ನೂರ್ ಸೆಕ್ಟರ್ನಲ್ಲಿ ನಡೆದಿರುವ ಘಟನೆಯಲ್ಲಿ ಬಿಎಸ್ಎಫ್ ಯೋಧ ಸುಶೀಲ್ ಕುಮಾರ್ ಹುತಾತ್ಮರಾಗಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನಲಾಗಿದೆ.
20ಕ್ಕೂ ಹೆಚ್ಚು ಸೇನಾ ಶಿಬಿರಗಳ ಮೇಲೆ ಪಾಕಿಸ್ತಾನ ರೇಂಜರ್’ಗಳು ಗುಂಡಿನ ದಾಳಿ ನಡೆಸಿದೆ. ಆರ್.ಎಸ್.ಪುರ, ಅಖ್ನೂರ್ ಸೆಕ್ಟರ್ನಲ್ಲಿ ನಡೆದಿರುವ ಘಟನೆಯಲ್ಲಿ ಬಿಎಸ್ಎಫ್ ಯೋಧ ಸುಶೀಲ್ ಕುಮಾರ್ ಹುತಾತ್ಮರಾಗಿದ್ದಾರೆ.
ಮತ್ತೊಬ್ಬ ಯೋಧ ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 5 ದಿನಗಳಲ್ಲಿ ಪಾಕಿಸ್ತಾನ 7ನೇ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೇನೆಯು ದಾಳಿಗೆ ತಕ್ಕ ಪ್ರತ್ತ್ಯುತ್ತರ ನೀಡಿದೆ.
(ಸಾಂದರ್ಭಿಕ ಚಿತ್ರ)